ಗುಜರಾತ್ ಮೂಲದ ಬೀರೇಂದ್ರ ಆರೋಪಿ. ಯಂತ್ರದ ರೆಕ್ಕೆಯ ಉದ್ದ 82 ಮೀ. ಇದ್ದು, ನಗರದ ಸಂಗಮ್ ವೃತ್ತದಲ್ಲಿ ತಿರುವು ಪಡೆಯುವ ವೇಳೆ ಅರಳಿ, ಬೇವು ಸೇರಿ ಮೂರು ಮರಗಳನ್ನು ಅಡ್ಡಿ ಬರಲಿವೆ ಎಂಬ ಉದ್ದೇಶದಿಂದ ಕತ್ತರಿಸಲಾಗಿದೆ. ಈ ಮರಗಳ ರೆಂಬೆ, ಕೊಂಬೆಗಳನ್ನು ಕತ್ತರಿಸಲು ಹಾಗೂ ಕಟಾವು ಮಾಡಿದ ಮರಗಳ ಪರ್ಯಾಯವಾಗಿ ಮೂರು ಗಿಡಗಳನ್ನು ನೆಡಬೇಕು ಎಂಬುದಾಗಿ ಷರತ್ತು ವಿಧಿಸಿ ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಆದರೆ, ಅರಣ್ಯ ಇಲಾಖೆಯ ಷರತ್ತು ಉಲ್ಲಂಘಿಸಿ ಮೂರು ಮರಗಳನ್ನು ಬಹುತೇಕ ಕಡಿದು ಹಾಕಿದೆ ಎಂಬುದಾಗಿ ಕಂಪನಿ ಪರ ಅರ್ಜಿ ಹಾಕಿದ ಗುಜರಾತ್ ಮೂಲದ ಬೀರೇಂದ್ರ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.