ತೃತೀಯ ಲಿಂಗಿ, ಪ್ರಿಯತಮ ಆತ್ಮಹತ್ಯೆ

ತೃತೀಯ ಲಿಂಗಿ,  ಪ್ರಿಯತಮ ಆತ್ಮಹತ್ಯೆ
ತೃತೀಯ ಲಿಂಗಿ, ಪ್ರಿಯತಮ ಆತ್ಮಹತ್ಯೆ
Published on

ಪ್ರಮುಖ ಮುಖ್ಯಾಂಶಗಳು

  • ಮನಸ್ತಾಪ
ಬಳ್ಳಾರಿ : ಹಣಕಾಸಿನ ವಿಚಾರವಾಗಿ ಮನಸ್ತಾಪ ಮಾಡಿಕೊಂಡ ತೃತೀಯ ಲಿಂಗಿ ಹಾಗೂ ಆಕೆಯ ಪ್ರಿಯತಮ ನೇಣಿಗೆ ಶರಣಾಗಿರುವ ಘಟನೆ ಇಲ್ಲಿನ ಮೇದಾರ ಕೇತಯ್ಯ ನಗರದಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಚಾಗನೂರು ಗ್ರಾಮ ತೃತೀಯ ಲಿಂಗಿ ಸುಹಾಸಿನಿ (29) ಹಾಗೂ ಹೊಸಪೇಟೆ ತಾಲೂಕಿನ ಮಲಪನಗುಡಿ ನಿವಾಸಿ ಪ್ರಿಯತಮ ರಾಜಶೇಖರ ( 27)ಮೃತರು. ಸುಹಾಸಿನಿ ಕಳೆದ ಆರು ವರ್ಷಗಳ ಹಿಂದೆ ತೃತೀಯ ಲಿಂಗಿಯಾದ ನಂತರ ಮನೆ ತೊರೆದಿದ್ದರು. ರಾಜಶೇಖರ ಹೊಸಪೇಟೆಯಲ್ಲಿ ವಾಸವಿದ್ದ. ಸುಹಾಸಿನಿ ಹಾಗೂ ರಾಜಶೇಖರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ಸುಹಾಸಿನಿ ತನ್ನ ದುಡಿಮೆಯ ಹಣದಲ್ಲಿ ರಾಜಶೇಖರನಿಗೆ ಆಟೋ ಕೊಡಿಸಿದ್ದು, ಅದರಿಂದಲೇ ಇಬ್ಬರು ಜೀವನ ಸಾಗಿಸುತ್ತಿದ್ದರು. ಪ್ರತಿ ಮಂಗಳವಾರ ಬಳ್ಳಾರಿಯ ದುರ್ಗಮ್ಮ ದೇವಸ್ಥಾನಕ್ಕೆ ಬರುವುದು ಇವರ ವಾಡಿಕೆಯಾಗಿತ್ತು. ಈ ಬಾರಿ ಹಂಪಿ ಉತ್ಸವದಲ್ಲಿ ಭಿಕ್ಷೆ ಬೇಡಿ ಸಂಗ್ರಹಿಸಿದ್ದ ಹಣದ ವಿಚಾರವಾಗಿ ಇಬ್ಬರ ನಡುವೆ ಸಣ್ಣಪುಟ್ಟ ಜಗಳ ನಡೆದಿತ್ತು ಎನ್ನಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಹಾಸಿನಿಯನ್ನು ಕೊಲೆ ಮಾಡಿದ ನಂತರ ಶೇಖರ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ನಂತರ ಸಾವಿನ ನಿಖರ ಕಾರಣ ತಿಳಿಯಬೇಕಿದೆ. ಈ ಕುರಿತು ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net