ಕಾನಹೊಸಹಳ್ಳಿ: ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ವರಣ ಧರೆ ತಂಪಾಗಿಸಿದ್ದು, ಕೃಷಿ ಚಟುವಟಿಕೆ ನಡೆಸಲು ಸಕಾಲವಾಗಿದೆ. ಕಾನಹೊಸಹಳ್ಳಿ ಹೋಬಳಿಯ ವ್ಯಾಪ್ತಿಯ ಪೂಜಾರಹಳ್ಳಿ ಮತ್ತು ಕೆ.ಬಿ.ಹಟ್ಟಿ ನಡುವೆ ಇರುವ ಹಳ್ಳ ತುಂಬಿ ಕೆಲ ಗಂಟೆ ಕಾಲ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು.
ಕಾನಹೊಸಹಳ್ಳಿಯ ಮುಖ್ಯಕಾಲುವೆ ದುರಸ್ತಿ ಮಾಡದ ಕಾರಣ ನೀರು ಸಾರಾಗವಾಗಿ ಹರಿಯದೇ ಕಾಲುವೆ ತುಂಬಿ ರಸ್ತೆ ನೀರಿನಿಂದ ಆವೃತವಾಗಿತ್ತು. ಕಾನಹೊಸಹಳ್ಳಿ 48.2 ಮಿಮೀ, ಗುಡೇಕೋಟೆ 13 ಮಿಮೀ, ಚಿಕ್ಕಜೋಗಿಹಳ್ಳಿ 32.2 ಮಿಮೀ, ಬಣವಿಕಲ್ಲು 28 ಮಿಮೀ ಮಳೆಯಾಗಿದೆ.