ತಾಪಂ ಇಒ, ಆಡಳಿತಾಧಿಕಾರಿ ಅಮಾನತುಗೊಳಿಸಿ

ಮೀನಹಳ್ಳಿ ತಾಯಣ್ಣ
ಮೀನಹಳ್ಳಿ ತಾಯಣ್ಣ
Published on

ಪ್ರಮುಖ ಮುಖ್ಯಾಂಶಗಳು

  • ಭ್ರಷ್ಟಾಚಾರ
ಬಳ್ಳಾರಿ : ತಾಲೂಕಿನ ಶಿಡಿಗನಮೊಳೆ ಗ್ರಾಪಂ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ನಡೆಯಲು ತಾಪಂ ಇಒ ಶ್ರೀಧರ್, ಕಚೇರಿ ಆಡಳಿತಾಧಿಕಾರಿ ಗಿರೀಶ್ ಕುಮಾರ್ ಅವರೇ ಕಾರಣರಾಗಿದ್ದು , ಕೂಡಲೇ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಹಳ್ಳಿ ತಾಯಣ್ಣ ಆರೋಪಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಲ ದಿನಗಳ ಹಿಂದೆ ತಾಲೂಕಿನ ಮೀನಹಳ್ಳಿ ಗ್ರಾಮದ ನಿವಾಸಿ ಡಿ.ರವಿಕುಮಾರ್ ಅವರು ಎನ್‌ಎ ಭೂಮಿಗೆ ಸಂಬಂಧಿಸಿದಂತೆ ‘ಇ-ಸ್ವತ್ತು’ ಪಡೆಯಲು ಸಿಡಿಗಿನಮೊಳೆ ಗ್ರಾಪಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಪಿಡಿಒ ಮುಶ್ರತ್ ಭಾನು ಐವತ್ತು ಸಾವಿರ ರೂ. ದೂರುದಾರ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಹಣ ಬೇಡಿಕೆಯಿಡುವಂತೆ ಇಒ ಶ್ರೀಧರ್ ಅವರು, ಪಿಡಿಒ ಮುಶ್ರತ್ ಭಾನು ಅವರ ಬಳಿ ಒತ್ತಡ ಹೇರಿದ್ದರು ಎಂಬುದಾಗಿ ಆರೋಪಿಸಿದರು. ಆದ್ದರಿಂದ, ಕೂಡಲೇ ಅಧಿಕಾರಿಗಳ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ವ್ಯಾಪಕ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಶಾಸಕರೇ ಕಾರಣರಾಗಿದ್ದಾರೆ. ಸರ್ಕಾರಿ ಕಚೇರಿಯ ನಾನಾ ಇಲಾಖೆಗಳಲ್ಲಿ ಶೇ. 90ರಷ್ಟು ಭ್ರಷ್ಟಾಚಾರ ನಡೆಯುತ್ತಿದೆೆ. ದಾಖಲೆಗಳು ಸರಿಯಾಗಿದ್ದರೂ ಅನಾವಶ್ಯಕ ವಿಳಂಬ ಮಾಡಲಾಗುತ್ತಿದೆ. ತಾಂತ್ರಿಕ ಕಾರಣಗಳ ನೆಪವೊಡ್ಡಿ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡುಸುತ್ತಿದ್ದಾರೆ ಎಂದು ದೂರಿದರು.
ಸರ್ಕಾರಿ ಸೇವೆ ಸೌಲಭ್ಯ ಪಡೆಯಲು ಸಾರ್ವಜನಿಕರ ಬಳಿ ಅಧಿಕಾರಿಗಳು ಯಾವುದೇ ಮುಲಾಜಿಲ್ಲಿದೇ ಹಣ ಕೇಳುತ್ತಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ಈ ಸ್ಥಾನಕ್ಕೆ ಬಂದಿದ್ದೇವೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಅಕ್ರೋಶ ಹೊರಹಾಕಿದರು. ಪದಾಧಿಕಾರಿಗಳಾದ ಎಲ್ಲನಗೌಡ, ಅಶೋಕ್, ರವಿಕುಮಾರ್ ಇದ್ದರು.
==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net