ಹಡಗಲಿಯಲ್ಲಿ ಹಕ್ಕುಪತ್ರಕ್ಕಾಗಿ ಹರತಾಳ

ಬೂದನೂರು ಗ್ರಾಮದ ಜನತಾ ಪ್ಲಾಟ್ ನಿವಾಸಿಗಳು ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಮಂಗಳವಾರ ಹಡಗಲಿ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಕೊಟ್ರೇಶ, ಸತ್ಯಪ್ಪ, ರಾಮಜ್ಜ, ಟಿ.ಬಸವರಾಜ, ಎಂ.ಫಕ್ಕೀರಪ್ಪ, ಕೆ.ಫಕ್ಕೀರಪ್ಪ, ಕೊಟ್ರೇಶ, ಪ್ರಹ್ಲಾದ, ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ದೊಡ್ಡಮನಿ ಇತರರಿದ್ದರು.

Published on

ಹೂವಿನಹಡಗಲಿ: ತಾಲೂಕಿನ ಬೂದನೂರು ಗ್ರಾಮದ ಜನತಾ ಪ್ಲಾಟ್ ನಿವಾಸಿಗಳು ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಮಂಗಳವಾರ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಸರ್ಕಾರ 1974-75ರಲ್ಲಿ ಜನತಾ ಪ್ಲಾಟ್‌ಗಾಗಿ 1.50 ಎಕರೆ ಜಮೀನು ಖರೀದಿಸಿ ಗ್ರಾಮದಲ್ಲಿ ನಿವೇಶನ ಹಾಗೂ ವಸತಿ ರಹಿತ 44 ಬಡ ಫಲಾನುಭವಿಗಳಿಗೆ ಹಂಚಿಕೆ ಮಾಡಿದೆ. ಆ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಿಕೊಂಡು ಈಗಾಲೇ 5 ದಶಕ ಕಳೆದರೂ ಹಕ್ಕುಪತ್ರ ನೀಡಿಲ್ಲ.
ಇದರಿಂದ ಇ-ಸ್ವತ್ತು, ಸಾಲ, ಸೌಲಭ್ಯ ಸಿಗುತ್ತಿಲ್ಲ. ಈ ಜಾಗದಲ್ಲಿ ಕಟ್ಟಿರುವ ಮನೆಗಳು ಬೀಳುವ ಸ್ಥಿತಿಯಲ್ಲಿದ್ದು ಗೃಹಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ತಕ್ಷಣ ಹಕ್ಕುಪತ್ರ ನೀಡಬೇಕು ಎಂದು ಫಲಾನುಭವಿಗಳು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net