ನಗರದಲ್ಲಿ ತಿರಂಗಾ ಯಾತ್ರೆ

ಬಳ್ಳಾರಿಯ ದುರ್ಗಮ್ಮ ದೇವಸ್ಥಾನದ ರಸ್ತೆಯಲ್ಲಿ ಎಬಿವಿಪಿ ವತಿಯಿಂದ ಭವ್ಯ ತಿರಂಗಾ ಯಾತ್ರೆ ನಡೆಯಿತು.
ಬಳ್ಳಾರಿಯ ದುರ್ಗಮ್ಮ ದೇವಸ್ಥಾನದ ರಸ್ತೆಯಲ್ಲಿ ಎಬಿವಿಪಿ ವತಿಯಿಂದ ಭವ್ಯ ತಿರಂಗಾ ಯಾತ್ರೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರು ಯಾತ್ರೆ

ಬಳ್ಳಾರಿ :

ಸ್ವಾತಂತ್ರೋತ್ಸವ ದಿನಾಚರಣೆ ಹಿನ್ನಲೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ನಗರದಲ್ಲಿ ಭವ್ಯ ತಿರಂಗಾ ಯಾತ್ರೆ ನಡೆಯಿತು.

ಅಂದಾಜು 350 ಮೀ. ಉದ್ದದ ಬೃಹತ್ ರಾಷ್ಟ್ರ ಧ್ವಜ ಹಿಡಿದು ನಗರದ ನಾನಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಎಬಿವಿಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಯಾತ್ರೆಯಲ್ಲಿ ಪಾಲ್ಗೊಂಡರು. ದೇಶಭಕ್ತಿ ಘೋಷಣೆಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಯಾತ್ರೆ ಗಮನ ಸೆಳೆಯಿತು.

ರಾಷ್ಟ್ರ ಧ್ವಜದೊಂದಿಗೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ದೇಶದ ಏಕತೆ, ಅಖಂಡತೆ ಮತ್ತು ದೇಶಭಕ್ತಿಯ ಸಂದೇಶ ಸಾರಿದರು. ಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ಸ್ವಾತಂತ್ರ್ಯೋತ್ಸವದ ಸಂಭ್ರಮ ಹೆಚ್ಚಿಸಿದರು.
ನಗರದ ವಿವಿಧೆಡೆ ಸಾರ್ವಜನಿಕರು ತಿರಂಗಾ ಯಾತ್ರೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಾತಂತ್ರೋತ್ಸವದ ಹಿನ್ನಲೆಯಲ್ಲಿ ನಡೆದ ಈ ಬೃಹತ್ ಮೆರವಣಿಗೆ ದೇಶಭಕ್ತಿಯ ವಾತಾವರಣ ಮೂಡಿಸಿತು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net