ಹಗರಿಬೊಮ್ಮನಹಳ್ಳಿ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ 2025-26ನೇ ಸಾಲಿನಲ್ಲಿ ಮೂರು ಶಾಲೆಗಳನ್ನು ಅತ್ಯುತ್ತಮ ಸರ್ಕಾರಿ ಎಸ್‌ಡಿಎಂಸಿ ಶಾಲೆ ಎಂದು ಶಿಕ್ಷಣ ಇಲಾಖೆ ಆಯ್ಕೆಮಾಡಿದೆ.
ತಾಲೂಕಿನ ಅಂಕಸಮುದ್ರ ಸರ್ಕಾರಿ ಪ್ರೌಢಶಾಲೆ, ಮಗಿಮಾವಿನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಳೇ ನೆಲ್ಲುಕುದುರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಸಮಗ್ರ ಶಿಕ್ಷಣ ಇಲಾಖೆಯ ರಾಜ್ಯ ಯೋಜನಾ ನಿರ್ದೇಶಕರು ಉತ್ತಮ ಎಸ್‌ಡಿಎಂಸಿ ಕಾರ್ಯಕ್ರಮದಡಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಶಾಲೆಗಳಿಗೆ ಪ್ರಶಸ್ತಿ ನೀಡುವ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸರ್ಕಾರಿ ಶಾಲೆಗಳನ್ನು ಮತ್ತು ಎಸ್‌ಡಿಎಂಸಿಗಳನ್ನು ಪ್ರೋತ್ಸಾಹಿಸಲು ಬ್ಲಾಕ್ ಮಟ್ಟದಲ್ಲಿ ಅತ್ಯುತ್ತಮ ಎಸ್‌ಡಿಎಂಸಿ ಹೊಂದಿರುವ ಶಾಲೆಗೆ ಪ್ರಶಸ್ತಿ ನೀಡುವುದು ಉದ್ದೇಶ ಹಿನ್ನೆಲೆಯಲ್ಲಿ ಆಯ್ಕೆಮಾಡಲಾಗಿದೆ.
"
ಒಂದು ಲಕ್ಷ ರೂ., 75 ಸಾವಿರ ರೂ., 50 ಸಾವಿರ ರೂ. ಬಹುಮಾನಗಳಿಗೆ 3 ಶಾಲೆಗಳ ಎಸ್‌ಡಿಎಂಸಿ ಆಯ್ಕೆಯಾಗಿದ್ದು, ಮುಂದೆ ಈ ಮಾದರಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಶಾಲೆಗಳು ಉತ್ತಮ ಕಾರ್ಯ ನಿರ್ವಹಿಸಬೇಕು.