ಬ್ಯಾನರ್ ಗಲಾಟೆ ಮೂವರು ಅಧಿಕಾರಿಗಳ ತಲೆದಂಡ

 ಗಲಾಟೆ ಮೂವರು ಅಧಿಕಾರಿಗಳ ತಲೆದಂಡ
ಗಲಾಟೆ ಮೂವರು ಅಧಿಕಾರಿಗಳ ತಲೆದಂಡ
Published on

ಪ್ರಮುಖ ಮುಖ್ಯಾಂಶಗಳು

  • ತಲೆದಂಡ
ಬಳ್ಳಾರಿ : ನಗರದ ಬ್ಯಾನರ್ ಗಲಾಟೆಗೆ ಸಂಬಂಧಿಸಿದಂತೆ ನಗರ ಡಿವೈಎಸ್ಪಿ ಚಂದ್ರಕಾಂತ್ ನಂದರೆಡ್ಡಿ ಅವರನ್ನು ಸ್ಥಳ ನಿಯುಕ್ತಿಗೊಳಿಸದೆ, ವರ್ಗಾವಣೆಗೊಳಿಸುವ ಮೂಲಕ ಸರ್ಕಾರ ಈ ಪ್ರಕರಣದಲ್ಲಿ ಮೂವರು ಪೊಲೀಸರ ಅಧಿಕಾರಿಗಳನ್ನು ತಲೆದಂಡ ಮಾಡಿದೆ. ಆದರೆ, ನೂತನ ನಿಯೋಜನೆಗೊಂಡಿರುವ ಐಪಿಎಸ್ ಅಧಿಕಾರಿ ಯಶ ಕುಮಾರ ಶರ್ಮಾ ಅವರು ನಗರ ಎಎಸ್ಪಿಯಾಗಿ ಹುದ್ದೆ ಸ್ವೀಕರಿಸುವ ಮುನ್ನವೇ ತಡೆ ಹಿಡಿಯಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
ನೂತನ ವರ್ಷ ಜ.1ರಂದು ವಾಲ್ಮೀಕಿ ಪುತ್ಥಳಿ ಅನಾವರಣದ ಹಿನ್ನೆಲೆಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ಹವಂಬಾವಿ ಪ್ರದೇಶದಲ್ಲಿ ಸಂಭವಿಸಿದ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಗುಂಡಿಗೆ ಬಲಿಯಾಗುವ ಮೂಲಕ ಜಿಲ್ಲೆಯಲ್ಲಿ ಮತ್ತೆ ಹಳೆಯ ಫ್ಯಾಕ್ಷನ್ ದಿನಗಳು ಮರುಕಳಿಸಿದ ಆತಂಕ ಎದುರಾಗಿತ್ತು. ಅಲ್ಲದೆ, ಈ ಭೀಕರ ಘಟನೆಯು ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
ಬ್ಯಾನರ್ ಗಲಾಟೆ ನಡೆದ ಬಳಿಕ ಸರಣಿ ಸುದ್ದಿಗೋಷ್ಠಿಗಳನ್ನು ನಡೆಸುತ್ತಿದ್ದ ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಸೇರಿ ಹಲವರು ಎಎಸ್ಪಿ ಪಿ.ರವಿಕುಮಾರ್, ನಗರ ಡಿವೈಎಸ್ಪಿ ಚಂದ್ರಕಾಂತ್ ನಂದಾರೆಡ್ಡಿ ವಿರುದ್ಧ ನೇರವಾಗಿ ಆರೋಪಿಸುವ ಜತೆಗೆ ಅಮಾನತಿಗೆ ಒತ್ತಾಯಿಸುತ್ತಿದ್ದರು. ಘಟನಾ ಸ್ಥಳದಲ್ಲಿ ಇರಲಿಲ್ಲ ಎಂಬ ಕಾರಣದಿಂದ ನೂತನವಾಗಿ ನಿಯೋಜನೆಗೊಂಡಿದ್ದ ಎಸ್ಪಿ ಪವನ್ ನಿಜ್ಜೂರ್ ಒಂದೇ ದಿನದಲ್ಲಿ ಅಮಾನತುಗೊಳಿಸಿತು. ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲರಾದರು ಎಂಬ ಕಾರಣದಿಂದ ಡಿಐಜಿ ವರ್ತಿಕಾ ಕಟಿಯಾರ್ ಅವರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಎತ್ತಂಗಡಿ ಮಾಡಿ ತಾತ್ಕಾಲಿಕವಾಗಿ ಬ್ರೇಕ್ ಹಾಕಿತ್ತು. ಆದರೆ, ಇದೀಗ ನಗರ ಡಿವೈಎಸ್ಪಿ ನಂದಾರೆಡ್ಡಿ ವರ್ಗಾವಣೆಗೊಳಿಸಿ, ತೆರವಾಗಿರುವ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ಯಶ ಕುಮಾರ ಶರ್ಮಾ ಅವರನ್ನು ಎಎಸ್ಪಿಯಾಗಿ ನಿಯೋಜಿಸಿದೆ. ಇದರಿಂದ ನಗರದಲ್ಲೇ ಎಗ್ಗಿಲ್ಲದೆ ನಡೆಯುತ್ತಿದ್ದ ಮಟ್ಕಾ, ಜೂಜಾಟ, ಗಾಂಜಾ ಮಾರಾಟ ಸೇರಿದಂತೆ ನಾನಾ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಅಲ್ಲದೇ. ಈ ಪ್ರಕರಣ ದಿನೇದಿನೆ ಕಗ್ಗಾಂಟಾಗುವ ಜತೆಗೆ ವಿಪಕ್ಷ ಬಿಜೆಪಿಗ ಅಸ್ತ್ರವಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೇತ್ತ ರಾಜ್ಯ ಸರ್ಕಾರ ನಗರ ಆಡಳಿತಕ್ಕೆ ಭರ್ಜರಿ ಸರ್ಜರಿ ನಡೆಸಲು ಐಪಿಎಸ್ ಅಧಿಕಾರಿ ನೇಮಿಸುವ ಮೂಲಕ ಬಿಜೆಪಿ ಆರೋಪಗಳಿಗೆ ತಾತ್ಕಾಲಿಕವಾಗಿ ಬ್ರೇಕ್ ನೀಡಿದೆ.
ಜಿಲ್ಲಾದ್ಯಂತ ಅಕ್ರಮಕ್ಕೂ ಕಡಿವಾಣ : ಬ್ಯಾನರ್ ಗಲಾಟೆ ಸಂಬಂಧ ನೂತನ ಐಜಿಪಿ, ಎಸ್ಪಿ ನಿಯೋಜನೆಗೊಂಡ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವ ಗಾಂಜಾ ಸೇರಿದಂತೆ ಡ್ರಗ್ಸ್‌ಗಳನ್ನು ಸಾಗಿಸುವವರು, ಮಾರಾಟ ಮಾಡುತ್ತಿರುವವರನ್ನು ಪತ್ತೆ ಹಚ್ಚಬೇಕು. ಸಣ್ಣ ಪುಟ್ಟ ಮಾರಾಟ ಮಾಡುವವರ ಹಿಂದೆ ಬೀಳದೇ ಅವುಗಳನ್ನು ನಗರದ ಒಳಗೆ ತಲುಪಿಸುತ್ತಿರುವವರನ್ನು ಹುಡಬೇಕು. ಮಟ್ಕಾ, ಜೂಜು, ಕ್ಲಬ್‌ಗಳು ಬಂದ್ ಮಾಡಿಸಬೇಕು ಎಂಬುದಾಗಿ ಐಜಿಪಿ ಸಭೆ ನಡೆಸಿ ಎಲ್ಲ ಠಾಣಾಧಿಕಾರಿಗಳಿಗೆ ಖಡಕ್ ಸೂಚಿಸಿದ್ದಾರೆ. ಕಳೆದ ಇಪ್ಪತ್ತು ದಿನಗಳಲ್ಲಿ 33 ಪ್ರಕರಣ ದಾಖಲಿಸಿ, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ 106 ಮಂದಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಇನ್ನೂ ಪ್ರಮುಖ ಪ್ರಕರಣಗಳಾದ ಚೀಟಿಯಲ್ಲಿ ಕೋಟ್ಯಾಂತರ ರೂ. ಚೀಟಿಂಗ್ ನಡೆಸಿದ ಇಬ್ಬರು ಆರೋಪಿಗಳು ನಾಪತ್ತೆಯಾಗಿರುವ ಎರಡು ತಂಡ ರಚಿಸಿ ಬಲೆ ಬೀಸಿತ್ತು.
ಕೋಟ್.. ಅಕ್ಟೋಬರ್ ತಿಂಗಳಲ್ಲಿ ನಡೆದ ಚೀಟಿ ವ್ಯವಹಾರದ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಆರೋಪಿ ವಿಶ್ವನಾಥನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನೂಂದು ಚೀಟಿಂಗ್ ಪ್ರಕರಣದ ಆರೋಪಿ ಪತ್ತೆ ಹಚ್ಚಲು ತಂಡ ರಚಿಸಿದೆ. ನಗರಕ್ಕೆ ಎಎಸ್ಪಿಯಾಗಿ ನಿಯೋಜನೆಗೊಂಡಿದ್ದ ಯಶ ಕುಮಾರ ಶರ್ಮಾ ಇನ್ನೂ ಅಧಿಕಾರ ಸ್ವೀಕರಿಸಿಲ್ಲ.
- ಡಾ. ಸುಮನ್ ಡಿ.ಪನ್ನೇಕರ್, ಎಸ್ಪಿ, ಬಳ್ಳಾರಿ.
ಕೋಟ್.. ಸರ್ಕಾರದಿಂದ ಅಧಿಸೂಚನೆ ಹೊರಡಿಸಿದ ನಂತರ ಹುದ್ದೆ ಸ್ವೀಕರಿಸಲು ಹದಿನೈದು ದಿನಗಳವರೆಗೆ ಕಾಲವಕಾಶ ಇರಲಿದೆ.
- ಡಾ.ಪಿ.ಎಸ್.ಹರ್ಷ, ಐಜಿಪಿ, ಬಳ್ಳಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net