ಸಿರಗುಪ್ಪ ನಿವಾಸಿಗಳಾದ ವಿಜಯ (70), ಸಂಧ್ಯಾ (35), ನಿಟ್ಟೂರಿನ ಪ್ರಸಾದ್ ರಾವ್(75) ಮೃತರು. ಒಂದೇ ಕುಟುಂಬದ ಎಲ್ಲರೂ ಸೇರಿ ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿ ಗ್ರಾಮಕ್ಕೆ ವಾಪಾಸ್ ಬರುತ್ತಿದ್ದ ವೇಳೆ ಬೆಳಗಿನ ಜಾವ ದಟ್ಟ ಮಂಜಿನ ಪರಿಣಾಮ ಕಾರು ಸೇತುವೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇನ್ನೂ ಕಾರಿನಲ್ಲಿದ್ದ ಪದ್ಮ , ಬ್ರಹ್ಮೇಶ್ವರಾವ್ ಅವರಿಗೆ ಗಂಭೀರ ಗಾಯಗಳು ಆಗಿದ್ದು, ನಗರದ ಟ್ರಾಮ್ ಕೇರ್ ಸೆಂಟರ್‌ಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಎಲ್ಲರೂ ನಿಟ್ಟೂರು ಗ್ರಾಮದವರು ಆಗಿದ್ದು , ಸಿರಗುಪ್ಪದಲ್ಲಿ ನೆಲೆಸಿದ್ದಾರೆ. ಈ ಕುರಿತು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.