ಗ್ರಾಮ ಶಾಂತಿಗಾಗಿ ತ್ರಿದಿನ ದೀಕ್ಷೆ

ಸೀತಾರಾಮ ಪರಿವಾರ ದೇವವರಿಗೆ ವಿಶೇಷ ಅಲಂಕಾರ.
ಸೀತಾರಾಮ ಪರಿವಾರ ದೇವವರಿಗೆ ವಿಶೇಷ ಅಲಂಕಾರ.
Published on

ಕಂಪ್ಲಿ: ಸಮೃದ್ಧ ಮಳೆ-ಬೆಳೆ ಹಾಗೂ ಗ್ರಾಮದ ಶಾಂತಿಗಾಗಿ ಶ್ರೀ ರಾಮರಂಗಾಪುರದಲ್ಲಿ ಬೆಲ್ಡೋಣ ರಾಮನಾಥಶಾಸ್ತ್ರಿ, ಶ್ರೀನಿವಾಸ ಶರ್ಮ ಹಾಗೂ ಶ್ರೀನಿವಾಸ ಆಚಾರಿಗಳ ಪೌರೋಹಿತ್ಯದಲ್ಲಿ ಕಳೆದ ಮೂರು ದಿನಗಳಿಂದ ಹೋಮ, ಹವನಾದಿ ನಾನಾ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಿದವು.

ಸೋಮವಾರ ತ್ರಿದಿನ ದೀಕ್ಷೆ ನಿಮಿತ್ತ ಶ್ರೀ ಸೀತಾರಾಮ ಪರಿವಾರ, ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ, ಶ್ರೀ ರುಕ್ಮಿಣಿ ಪಾಂಡುರಂಗ ಪ್ರತಿಮೆಗಳ ಅಲಂಕಾರ, ಅಭಿಷೇಕ, ದೇವತಾ ಹೋಮ, ಮಹಾಮಂಗಳಾರತಿ, ಅನ್ನಸಂತರ್ಪಣೆ ಇದಕ್ಕೂ ಮುನ್ನಾ ಕಳೆದ ಎರಡು ದಿನಗಳಲ್ಲಿ ಗಂಗಾಪೂಜೆ, ಗಣಪತಿ ಪೂಜೆ, ಸಪ್ತ ಪುಣ್ಯಾಹವಾಚನ, ಪ್ರಧಾನ ಕಲಶ, ನವಗ್ರಹ ಕಲಶ ಸ್ಥಾಪನಾದಿಗಳು ಶ್ರದ್ಧೆಭಕ್ತಿಯಿಂದ ನಡೆದವು. ಸರ್ವ ಸಮುದಾಯಗಳ ಸದ್ಭಕ್ತರು ಮೂರು ದಿನಗಳ ಕಾಲ ಗ್ರಾಮ ಶಾಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net