ಸಿರಗುಪ್ಪ ನಗರಸಭೆ ಕಾರ್ಯಾಲಯ ಮುಂಭಾಗದಲ್ಲಿ ವಿಷ್ಟುವಿಲಾಸ್ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತದಿಂದ ಶುದ್ಧ ಕುಡಿಯುವ ನೀರಿನ ಅರವಟಿಕೆಯನ್ನು ಗುರುಬಸವ ಮಠದ ಬಸವ ಭೂಷಣ ಸ್ವಾಮೀಜಿ ಉದ್ಘಾಟಿಸಿದರು. ವಿಷ್ಣುವಿಲಾಸ್ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಎಚ್.ಹನುಮಂತಯ್ಯ ಶೆಟ್ಟಿ, ಬಲಕುಂದಿ ಸೌಹಾರ್ದ ಸಂಘದ ಅಧ್ಯಕ್ಷ ಚಿಂತಕುಂಟೆ ಗಾದಿಲಿಂಗನಗೌಡ, ನಿರ್ದೇಶಕರಾದ ಜೆ.ಶ್ರೀರಾಮ, ಎಂ.ಭದ್ರಿನಾಥ ಇತರರಿದ್ದರು.
ಸಿರಗುಪ್ಪ: ಬೇಸಿಗೆಯಲ್ಲಿ ಜನರ ನೀರಿನ ದಾಹ ತೀರಿಸಿ ವಿಷ್ಟುವಿಲಾಸ್ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಬ್ಯಾಂಕ್ ಅಧ್ಯಕ್ಷ ಎಚ್.ಹನುಮಂತಯ್ಯಶೆಟ್ಟಿ ಅವರು ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ ಎಂದು ಬಸವ ಭೂಷಣ ಸ್ವಾಮೀಜಿ ಹೇಳಿದರು.
ಪಟ್ಟಣದ ನಗರಸಭೆ ಕಾರ್ಯಾಲಯ ಮುಂಭಾಗದಲ್ಲಿ ವಿಷ್ಟುವಿಲಾಸ್ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತದಿಂದ ಶನಿವಾರ ಶುದ್ಧ ಕುಡಿಯುವ ನೀರಿನ ಅರವಟಿಗೆ ಉದ್ಘಾಟಿಸಿ ಮಾತನಾಡಿದರು.
ನಗರ ಮತ್ತು ಸುತ್ತ್ತಲಿನ ಗ್ರಾಮೀಣ ಭಾಗಗಳಿಂದ ನಾನಾ ಕೆಲಸಗಳಿಗೆ ನಗರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಹಲವಾರು ವಷರ್ಗಳಿಂದ ಶುದ್ಧ ಕುಡಿಯುವ ನೀರಿನ ಅರವಟಿಗೆ ಸ್ಥಾಪಿಸಿದ್ದಾರೆ ಎಂದರು.
ವಿಷ್ಟುವಿಲಾಸ್ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಬ್ಯಾಂಕ್ ಅಧ್ಯಕ್ಷ ಎಚ್.ಹನುಮಂತಯ್ಯ ಶೆಟ್ಟಿ ಮಾತನಾಡಿ, ದಿನೇ ದಿನೆ ತಾಪಮಾನ ಹೆಚ್ಚಾಗುತ್ತಿದ್ದು, ಪಟ್ಟಣಕ್ಕೆ ವ್ಯಾಪಾರ ವಹಿವಾಟಿಗೆ ಬರುವ ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ನೀರಿನ ದಾಹ ತಣಿಸಲು ಪ್ರತಿ ವಷರ್ದಂತೆ ಈ ವಷರ್ವೂ ಸಹ ಬ್ಯಾಂಕ್ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟಿಗೆ ಆರಂಭಿಸಲಾಗಿದೆ ಎಂದರು.
ನಿರ್ದೇಶಕರಾದ ಎಂ.ಭದ್ರಿನಾಥ, ಕೆ.ಆರ್.ನಾಗರಾಜ ಶೆಟ್ಟಿ, ಕೆ.ಸೂರ್ಯಪ್ರಕಾಶ, ಎ.ಸಂತೋಷ, ಮುಖ್ಯಕಾರ್ಯನಿರ್ವಾಹಕ ಅನಿಲ ಕುಮಾರ್, ಸಿರಿಮಹಾಲಕ್ಷ್ಮೀ ಸೌಹಾರ್ದ ನಿರ್ದೇಶಕ ರಾಘವೇಂದ್ರ ಆಚಾರ್ಯ ಇತರರಿದ್ದರು.