ನಗರದ ತಾಪಂ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಕುಡಿವ ನೀರಿನ ಅಭಾವ ಹೆಚ್ಚಿರುವ ಕಡೆಗೆ ಖಾಸಗಿ ಬೋರ್‌ವೆಲ್ ಬಾಡಿಗೆಗೆ ಪಡೆದು ನೀರು ಪೂರೈಕೆ ಮಾಡಬೇಕು. ಜೆಜೆಎಂ ಯೋಜನೆ ಮೌಲ್ಯ ಕಳೆದುಕೊಂಡಿದೆ. ಚಿಗಟೇರಿ ಗ್ರಾಮದಲ್ಲಿ ಪೈಪ್‌ಲೈನ್ ಸೋರಿಕೆಯಾಗಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಗ್ರಾಮದ ಮಹಿಳೆಯರು ಮೂರು ವರ್ಷದಿಂದ ಸರಿಪಡಿಸುವಂತೆ ಕೋರಿದ್ದು, ಕೂಡಲೆ ಸರಿಪಡಿಸಬೇಕೆಂದರು.