ಕಂಪ್ಲಿ ತಾಲೂಕಿನ ಸಮಸ್ಯೆಗಳಿಗಿಲ್ಲ ಪರಿಹಾರ

ಫೋಟೋ:ಕಂಪ್ಲಿ ಬಳಿ ತುಂಗಭದ್ರಾ ನದಿಗೆ ನಿರ್ಮಿಸಿರುವ ಸೇತುವೆ ಶಿಥಿಲವಾಗಿರುವುದು.
ಫೋಟೋ:ಕಂಪ್ಲಿ ಬಳಿ ತುಂಗಭದ್ರಾ ನದಿಗೆ ನಿರ್ಮಿಸಿರುವ ಸೇತುವೆ ಶಿಥಿಲವಾಗಿರುವುದು.
Published on
ಕಂಪ್ಲಿ: ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ತಾಲೂಕಿನ ನಾನಾ ಸಮಸ್ಯೆಗಳ ಬಗ್ಗೆ ಪ್ರಸ್ತಾಪವಾಗಲಿದೆ. ಈ ಮೂಲಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
ತುಂಗಭದ್ರಾ ನದಿಗೆ ಹೊಸ ಸೇತುವೆ ನಿರ್ಮಿಸುವಂತೆ ಎರಡು ದಶಕಗಳಿಂದ ಒತ್ತಾಯ ಕೇಳಿಬರುತ್ತಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಳೆಯ ಸೇತುವೆ ವೀಕ್ಷಿಸಿದ್ದಾರೆ. ಈ ಕುರಿತ ಪ್ರಸ್ತಾವನೆಗೆ ಹಣಕಾಸು ಇಲಾಖೆಯ ಅನುಮೋದನೆ ಬಾಕಿ ಇದೆ. ಕಂಪ್ಲಿ ಮೂಲಕ ಹಾದು ಹೋಗುವ ಗಂಗಾವತಿ-ದರೋಜಿ ಬ್ರಾಡ್‌ಗೇಜ್ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, ಕಾಮಗಾರಿ ಅನುಷ್ಠಾನಕ್ಕೆ 919.49 ಕೋಟಿ ರೂ. ಮಂಜೂರಾಗಬೇಕಿದೆ. ರಾಜ್ಯದ ಪಾಲಿನ ಹಣ ತ್ವರಿತ ಬಿಡುಗಡೆಗೊಳ್ಳಬೇಕಿದೆ.
ರೈತರ ಬಹುವರ್ಷಗಳ ಬೇಡಿಕೆಯಾಗಿರುವ ಸಹಕಾರಿ ಇಲ್ಲವೇ ಸಾರ್ವಜನಿಕ ವಲಯದ ಸಕ್ಕರೆ ಕಾರ್ಖಾನೆ, ಪಶು ವೈದ್ಯಕೀಯ ಕಾಲೇಜು, ಮೆಣಸಿನಕಾಯಿ ಕೋಲ್ಡ್ ಸ್ಟೋರೇಜ್, ಬಿಇಒ ಕಚೇರಿ ಆರಂಭಗೊಳ್ಳಬೇಕಿದೆ. ತಾಲೂಕು ಮಟ್ಟದ ಕಚೇರಿಗಳ ಆರಂಭವಾಗಬೇಕಿದೆ. ಏತ ನೀರಾವರಿ, ಕೆರೆ ತುಂಬಿಸುವ ಯೋಜನೆಗೆ ಅನುದಾನ, ನಾರಿಹಳ್ಳಕ್ಕೆ ಮೇಲ್ಮಟ್ಟದ ಸೇತುವೆಗಳ ನಿರ್ಮಾಣ, ಮಾಗಾಣಿ ರಸ್ತೆಗಳ ಅಭಿವೃದ್ಧಿ, ತಾಲೂಕು ಆಡಳಿತ ಸೌಧ, ಪ್ರವಾಸಿ ಮಂದಿರ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ಮಂಜೂರು ಆಗಬೇಕಿದೆ.
ಹಂಪಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಪ್ರೇರಣೆಯಾದ ಕಂಪಿಲರಾಯ, ಗಂಡುಗಲಿ ಕುಮಾರರಾಮನ ಸ್ಮರಣಾರ್ಥ ಪ್ರತಿ ವರ್ಷ ಕಂಪ್ಲಿ ಉತ್ಸವ ಆಚರಣೆ ಕುರಿತು ಚರ್ಚೆ ನಡೆಯಬೇಕಿದೆ. ನಮಾಮಿ ಗಂಗೆಯಂತೆ ನಮಾಮಿ ತುಂಗಭದ್ರಾ ನಿರ್ಮಲ ಯೋಜನೆ ಕೈಗೊಂಡು ನದಿಯ ಪಾವಿತ್ರ್ಯ ಕಾಪಾಡುವ ಕುರಿತು ಚರ್ಚೆಯಾಗಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net