ತಾಯಿಯ ತ್ಯಾಗಕ್ಕೆ ಸರಿಸಾಟಿ ಇಲ್ಲ

ಹಂಪಾಪಟ್ಟಣದಲ್ಲಿ ಶ್ರೀ ಮಾತಾ ಸೇವಾ ಟ್ರಸ್ಟ್‌ನಿಂದ ಆಯೋಜಿಸಿದ್ದ ವಿಶ್ವತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳೆಯರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಸಂಸ್ಥಾಪಕ ಜಿ.ಶ್ರೀನಿವಾಸ, ಗ್ರಾಪಂ ಅಧ್ಯಕ್ಷೆ ಪತ್ರಿ ಗೀತಾ ಯಲ್ಲಪ್ಪ, ಉಪಾಧ್ಯಕ್ಷ ಟಿ.ಮಂಜುನಾಥ, ಸದಸ್ಯ ಬಲ್ಲಾಹುಣಸಿ ನಾಗರಾಜ ಮತ್ತಿತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಮಾಜ
  • ಮಹಿಳೆ
  • ಸಮಾನತೆ
ಹಗರಿಬೊಮ್ಮನಹಳ್ಳಿ: ಹಂಪಾಪಟ್ಟಣದ ನಗರೇಶ್ವರ ದೇಗುಲದಲ್ಲಿ ಶ್ರೀಮಾತಾ ಸೇವಾ ಟ್ರಸ್ಟ್ ಹಾಗೂ ಸ್ಥಳೀಯರು ವಿಶ್ವ ತಾಯಂದಿರ ದಿನವನ್ನು ಭಾನುವಾರ ಆಚರಿಸಿದರು.
ಗ್ರಾಪಂ ಅಧ್ಯಕ್ಷೆ ಪತ್ರಿ ಗೀತಾ ಯಲ್ಲಪ್ಪ ಕಾರ್ಯಕ್ರಮ ಉದ್ಘಾಟಿಸಿ, ತಾಯಿಯ ತ್ಯಾಗ, ಪ್ರೀತಿ ಹಾಗೂ ಸೇವೆಯ ಮನೋಭಾಕ್ಕೆ ಸರಿಸಾಟಿ ಇಲ್ಲ ಎಂದರು. ಉಪಾಧ್ಯಕ್ಷ ಟಿ.ಮಂಜುನಾಥ ಮಾತನಾಡಿ, ಸಮಾಜದಲ್ಲಿ ಕುಟುಂಬ ನಿರ್ವಹಣೆ, ಗೌರವಯುತವಾಗಿ ಬಾಳಲು ತಾಯಿಯ ಮಾರ್ಗದರ್ಶನ ಪ್ರಮುಖವಾಗಿದೆ ಎಂದರು.
ಟ್ರಸ್ಟ್ ಸಂಸ್ಥಾಪಕ ಜಿ.ಶ್ರೀನಿವಾಸ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೂ ಸಮಾನತೆ, ಸ್ಥಾನಮಾನ, ಗೌರವ ಸಿಗುವಲ್ಲಿ ತಾಯಂದಿರ ಸೇವೆ ಅಪಾರವಾಗಿದೆ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಬಲ್ಲಾಹುಣಿಸಿ ನಾಗರಾಜ, ಶಿಕ್ಷಕ ಮಣಿಗಾರ್ ಉಮೇಶ, ಪ್ರಮುಖರಾದ ಸುಜಾತಾ, ಕೆ.ಹುಲುಗಪ್ಪ, ಆರ್.ಸುಮಾ, ಆರ್.ಬಸವರಾಜ, ಹಡಗಲಿ ಖಾಜಾ, ಒ.ಕೊಟ್ರೇಶ, ಕೆ.ಎಸ್.ಹುಲುಗಪ್ಪ, ಜಿ.ಫಕೀರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net