ಬಿ.ಎಸ್ಸಿ ಬೋಧನೆಗೆ ಉಪನ್ಯಾಸಕರಿಲ್ಲ

ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೊರನೋಟ.
ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೊರನೋಟ.
Published on
ಕಂಪ್ಲಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಿಂದ ಬಿ.ಎಸ್ಸಿ ಆರಂಭಿಸಲಾಗಿದೆ. ಆದರೆ, ಬೋಧಕರಿಲ್ಲದೆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಯೋಗಾಲಯ ಸಲಕರಣೆಗಳಿಲ್ಲದಿರುವುದರಿಂದ ಬೇರೆಡೆ ಪ್ರಯೋಗಾಲಯಕ್ಕೆ ತೆರಳಬೇಕಿದೆ.
ಬಿ.ಎಸ್ಸಿ ಆರಂಭವಾಗಿ ನಾಲ್ಕು ತಿಂಗಳಾದರೂ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಕಂಪ್ಯೂಟರ್ ಸೈನ್ಸ್ ತರಗತಿಗಳು ನಡೆಯುತ್ತಿಲ್ಲ. ಬಿ.ಎಸ್ಸಿ ಪಿಸಿಎಂ, ಪಿಎಂಸಿಎಸ್ ಹಾಗೂ ಸಿಬಿಜೆಡ್ ವಿಭಾಗಕ್ಕೆ ಒಟ್ಟು 35 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪ್ರಸ್ತುತ ಕನ್ನಡ, ಇಂಗ್ಲಿಷ್, ಭಾರತೀಯ ಸಂವಿಧಾನ, ಕಂಪ್ಯೂಟರ್ ಲ್ಯಾಬ್ ತರಗತಿ ನಡೆಯುತ್ತಿದ್ದು, ಇತರ ವಿಷಯಗಳ ಬೋಧನೆಗೆ ಉಪನ್ಯಾಸಕರಿಲ್ಲ.
ಪ್ರಯೋಗಾಲಯಕ್ಕಾಗಿ ಗಂಗಾವತಿಗೆ ಹೋಗಬೇಕಿದೆ. ಇದರಿಂದಾಗಿ ಪ್ರಯೋಗಾಲಯಕ್ಕೆ ಸಲಕರಣೆಗಳು, ಗ್ರಂಥಾಲಯಕ್ಕೆ ಪಠ್ಯಪುಸ್ತಕಗಳು, ಕಾಯಂ ಉಪನ್ಯಾಸಕರನ್ನು ನಿಯೋಜಿಸಬೇಕೆಂಬುದು ವಿದ್ಯಾರ್ಥಿಗಳ ಒತ್ತಾಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net