ನಗರದ ಕೌಲ್‌ಬಜಾರ್ ನಿವಾಸಿ ಸಂತೋಷ್‌ಕುಮಾರ್ ಅವರಿಗೆ ಸೇರಿದ ಶಾಸ್ತ್ರಿ ನಗರದ ಗೋದಾಮಿನಲ್ಲಿ ಬಳ್ಳಾರಿಯ ಜೋಸೆಫ್ ಎಂಬಾತ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಈತ ಕಳೆದ ನವೆಂಬರ್‌ನಿಂದ ಜೂನ್ ನಡುವಿನ ಅವಧಿಯಲ್ಲಿ ಮಾಲೀಕನ ಕಣ್ಣು ತಪ್ಪಿಸಿ, ಹಂತ ಹಂತವಾಗಿ ಒಟ್ಟು 27,79,350 ರೂ. ಮೌಲ್ಯದ ‘ಡುಲೆಕ್ಸ್ ’ ಕಂಪನಿಯ ಪೇಂಟ್‌ಗಳನ್ನು ಕಳ್ಳತನ ಮಾಡಿದ್ದಾನೆ. ಗೋಡೌನ್‌ನಲ್ಲಿ ದಾಸ್ತಾನು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.