ಎಮ್ಮಿಗನೂರಿನಲ್ಲಿ ಬಿ.ಸದಾಶಿವಗೌಡ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಿಲಯ ಪಾಲಕ ಮಾರೇಶ, ಟ್ರಸ್ಟ್ ಅಧ್ಯಕ್ಷ ಬಿ.ಗುರುಮಹಾಂತೇಶ, ಪ್ರಮುಖರಾದ ಕುರುಬರ ಹೇಮೇಶ್ವರ, ಕೆ.ಹಿಮಂತರಾಜ ಶರಣ, ಬೆಳಗೋಡ್ ತಿಪ್ಪೇಶ, ಶಂಕ್ರಪ್ಪ, ಚಾನಾಳ ಈರಣ್ಣ, ಎಚ್.ಪೀರಾವಲಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಾಂಸ್ಕೃತಿಕೋತ್ಸವ
ಚಾಲನೆ
ಆಧುನಿಕ
ಕಂಪ್ಲಿ: ಎಮ್ಮಿಗನೂರು ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಿಲಯ ಆವರಣದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಮಾವಿನಹಳ್ಳಿಯ ಶ್ರೀ ಸಿದ್ಧೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್‌ನಿಂದ ಶನಿವಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ತತ್ವಪದ ಕಲಾವಿದ ಬಿ.ಸಿದ್ದಪ್ಪ ಸಾಂಸ್ಕೃತಿಕೋತ್ಸವಕ್ಕೆ ಚಾಲನೆ ನೀಡಿ, ಆಧುನಿಕ ಸೋಂಕಿನಲ್ಲಿ ರಂಗಭೂಮಿ ಚಟುವಟಿಕೆಗಳು ದಿನೇ ದಿನೆ ಮಂಕಾಗುತ್ತಿದೆ ಎಂದು ವಿಷಾಧಿಸಿದರು.
ರಂಗಭೂಮಿ ಕಲಾವಿದರಾದ ಜಿ.ಪಾಂಡುರಂಗ, ಡಿ.ಜಡಿಯಪ್ಪ ಮಾತನಾಡಿ, ಮಕ್ಕಳಿಗೆ ಪಠ್ಯದೊಂದಿಗೆ ರಂಗಭೂಮಿ ಕಲೆ ಕಲಿಸಿಕೊಡಬೇಕಿದೆ ಎಂದರು. ಆಯುಷ್ ವೈದ್ಯರಾದ ಪ್ರಹ್ಲಾದ್ ಆರ್.ಐಲಿ, ಬಸವರಾಜ ಮಾತನಾಡಿ, ನಿತ್ಯ ಜೀವನದಲ್ಲಿ ಯೋಗ, ಧ್ಯಾನ, ಪ್ರಾಣಾಯಾಮ ಅಭ್ಯಾಸದಿಂದ ಆರೋಗ್ಯವಂತರಾಗಬಹುದು ಎಂದರು.
ಎಮ್ಮಿಗನೂರಿನ ಬಿ.ಸದಾಶಿವಗೌಡ ತಂಡದವರಿಂದ ತತ್ವಪದ ಹಾಡುಗಾರಿಕೆ, ಕುರುಗೋಡಿನ ಕಗ್ಗಲ್ ಲೋಕಣ್ಣ ತಂಡದವರಿಂದ ಯೋಗ ನೃತ್ಯ, ಎಚ್.ಲೋಕರಾಜ ತಂಡದವರಿಂದ ಸಮೂಹ ನೃತ್ಯ ಪ್ರದರ್ಶನಗೊಂಡವು.