ಶುದ್ಧ ಮನಸ್ಸಿನ ಕಾಯಕ ಶ್ರೇಷ್ಠ

ಕಂಪ್ಲಿ ತಹಸಿಲ್ ಕಚೇರಿಯಲ್ಲಿ ಕಾಯಕ ಶರಣರ ಜಯಂತ್ಯುತ್ಸವ ಆಚರಿಸಲಾಯಿತು. ಶಿರಸ್ತೇದಾರ್ ಜಿ.ಪಂಪಾಪತಿ, ಪ್ರಮುಖರಾದ ಎಸ್.ಡಿ.ರಮೇಶ, ವಿರೂಪಾಕ್ಷಗೌಡ, ಮಾಲತೇಶ ದೇಶಪಾಂಡೆ, ರಾಧಾ, ವೈಷ್ಣವಿ ಇತರರಿದ್ದರು.
ಕಂಪ್ಲಿ ತಹಸಿಲ್ ಕಚೇರಿಯಲ್ಲಿ ಕಾಯಕ ಶರಣರ ಜಯಂತ್ಯುತ್ಸವ ಆಚರಿಸಲಾಯಿತು. ಶಿರಸ್ತೇದಾರ್ ಜಿ.ಪಂಪಾಪತಿ, ಪ್ರಮುಖರಾದ ಎಸ್.ಡಿ.ರಮೇಶ, ವಿರೂಪಾಕ್ಷಗೌಡ, ಮಾಲತೇಶ ದೇಶಪಾಂಡೆ, ರಾಧಾ, ವೈಷ್ಣವಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸಿಲ್
  • ಕಚೇರಿ
  • ಸಭಾಂಗಣ
ಕಂಪ್ಲಿ: ದೇಶದ ಅಭಿವೃದ್ಧಿಗೆ ಪ್ರಾಮಾಣಿಕ ಕಾಯಕವೇ ಆಧಾರವಾಗಿದೆ ಎಂದು ಶಿರಸ್ತೇದಾರ್ ಜಿ.ಪಂಪಾಪತಿ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಯಕ ಶರಣರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಎಲ್ಲ ಕಾಯಕಗಳು ಸಮಾನ ಮತ್ತು ಶ್ರೇಷ್ಠವಾಗಿವೆ. ಶುದ್ಧ ಮನಸ್ಸಿನಿಂದ ಮಾಡಿದ ಕಾಯಕ ಶ್ರೇಷ್ಠವಾಗಿರುತ್ತದೆ ಎಂದರು.
ಶಿರಸ್ತೇದಾರ್ ಎಸ್.ಡಿ.ರಮೇಶ, ಆಹಾರ ನಿರೀಕ್ಷಕ ವಿರೂಪಾಕ್ಷಗೌಡ, ಸಿಬ್ಬಂದಿ ಮಾಲತೇಶ ದೇಶಪಾಂಡೆ, ಲಕ್ಷ್ಮಣನಾಯ್ಕ, ರಾಧಾ, ವೈಷ್ಣವಿ, ವನಿತಾ, ಶಿಲ್ಪಾ, ಪಿ.ಸಿ.ಅಂಜಿನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net