ಈಡೇರುತ್ತವೆ ಭಕ್ತರ ಇಷ್ಟಾರ್ಥಗಳು

ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ಹಿನ್ನೆಲೆಯಲ್ಲಿ ಶಾಸಕ ನೇಮಿರಾಜ್ ನಾಯ್ಕ ಹಗರಿಬೊಮ್ಮನಹಳ್ಳಿಯಿಂದ ಪಾದಯಾತ್ರೆ ಕೈಗೊಂಡರು.
ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ಹಿನ್ನೆಲೆಯಲ್ಲಿ ಶಾಸಕ ನೇಮಿರಾಜ್ ನಾಯ್ಕ ಹಗರಿಬೊಮ್ಮನಹಳ್ಳಿಯಿಂದ ಪಾದಯಾತ್ರೆ ಕೈಗೊಂಡರು.
Published on
ಹಗರಿಬೊಮ್ಮನಹಳ್ಳಿ: ಕೊಟ್ಟೂರೇಶ್ವರಸ್ವಾಮಿ ರಥೋತ್ಸವ ನಿಮಿತ್ತ ಶಾಸಕ ಕೆ.ನೇಮಿರಾಜ್ ನಾಯ್ಕ, ಪತ್ನಿ ವಾಣಿ ಅವರೊಂದಿಗೆ ಬುಧವಾರ ಪಾದಯಾತ್ರೆ ಮೂಲಕ ಕೊಟ್ಟೂರಿಗೆ ತೆರಳಿದರು.
ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿ ರಥೋತ್ಸವ ನಾಡಿನಲ್ಲಿ ಪ್ರಸಿದ್ಧಿಯಾಗಿದೆ, ಮಹಾ ಮಹಿಮ ಶ್ರೀ ಗುರುಬಸವೇಶ್ವರ ಸ್ವಾಮಿ ಅವರ ಆಶೀರ್ವಾದದಿಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ ಎಂದರು.
ನಂದಿಪುರ ಮಠದ ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ರಥೋತ್ಸವಗಳು ಸಮಾಜದಲ್ಲಿ ಏಕತೆ, ಸಮಾನತೆ ಮತ್ತು ಭಕ್ತಿಯನ್ನು ಬಲಪಡಿಸುವ ಉತ್ಸವಗಳಾಗಿವೆ. ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ಜನತೆಗೆ ಬಳುವಳಿಯಾಗಿ ನೀಡುವ ಕಾರ್ಯಕ್ರಮಗಳಾಗಿವೆ ಎಂದರು.
ಮಾರ್ಗದಲ್ಲಿ ಪಾದಯಾತ್ರಿಕರಿಗೆ ಭಕ್ತರು ಉಪಹಾರ, ಹಣ್ಣು, ಪಾನಕ, ಟೀ, ಬಿಸ್ಕತ್ತು ವ್ಯವಸ್ಥೆ ಮಾಡಿದ್ದರು. ವೈದ್ಯಕೀಯ ಸೇವೆ ವ್ಯವಸ್ಥೆ ಮಾಡಲಾಗಿತ್ತು. ಮುಸ್ಲಿಮರು ಕೂಡ ಪಾದಯಾತ್ರೆ ಕೈಗೊಂಡರು. ಪಾದಯಾತ್ರಿಗಳಿಗೆ ಹಣ್ಣು-ಹಂಪಲು ನೀಡಿ ಸೌಹಾರ್ದ ಮೆರೆದರು. ಹೂವಿನ ಹಡಗಲಿಯ ಶಾಸಕ ಕೃಷ್ಣಾನಾಯ್ಕ ಮತ್ತು ಬಿಜೆಪಿಯ ಮುಖಂಡ ಓದೋ ಗಂಗಪ್ಪ ಹಗರಿಬೊಮ್ಮನಹಳ್ಳಿಯಿಂದ ಸ್ವಾಮೀಜಿಯೊಂದಿಗೆ ಪಾದಯಾತ್ರೆ ಕೈಗೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net