ಮಾಂಗಲ್ಯ ಸರ ಕದ್ದ ಕಳ್ಳ

ಮಾಂಗಲ್ಯ ಸರ ಕದ್ದ ಕಳ್ಳ
ಮಾಂಗಲ್ಯ ಸರ ಕದ್ದ ಕಳ್ಳ
Published on

ಪ್ರಮುಖ ಮುಖ್ಯಾಂಶಗಳು

  • ಮಾಂಗಲ್ಯ ಸರ ದೋಚಿ ಕಳ್ಳ ಪರಾರಿ
ಬಳ್ಳಾರಿ :

ಇಲ್ಲಿನ ಅಲ್ಲಿಪುರದ ಖಾಸಗಿ ಶಾಲೆಯ ಕ್ವಾರ್ಟ್‌ಸ್‌ನಲ್ಲಿ ಮಲಗಿದ್ದ ಮಹಿಳೆಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ, 1.20 ಲಕ್ಷ ರೂ. ಮೌಲ್ಯದ ಬಂಗಾರದ ಮಾಂಗಲ್ಯ ಸರವನ್ನು ಕಳ್ಳನೊಬ್ಬ ದೋಚಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಾಲೆಯಲ್ಲಿ ಆಯಾ ಕೆಲಸ ಮಾಡುವ ಗಾದಿಲಿಂಗಮ್ಮ ಮಧ್ಯಾಹ್ನ ಕೆಲಸ ಮುಗಿಸಿ ಕ್ವಾಟರ್ಸ್‌ನಲ್ಲಿ ಮಲಗಿದ್ದ ವೇಳೆ, ಮುಖಕ್ಕೆ ಮಂಕಿ ಕ್ಯಾಪ್ ಧರಿಸಿ ಯುವಕನೊಬ್ಬ ಅಕ್ರಮವಾಗಿ ಮನೆಗೆ ನುಗ್ಗಿದ್ದಾನೆ. ಹಿಂದಿ ಭಾಷೆಯಲ್ಲಿ ಬೆದರಿಸಿ, ಚಾಕು ತೋರಿಸಿ ಕುತ್ತಿಗೆ ಹಿಸುಕಿ ಜೀವಭಯ ಹುಟ್ಟಿಸಿದ್ದಾನೆ. ಬೆದರಿಕೆಗೆ ಹೆದರಿದ ಮಹಿಳೆ ಕೊರಳಿನಲ್ಲಿದ್ದ 20 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಆತನಿಗೆ ನೀಡಿದ್ದಾರೆ. ಬಳಿಕ ಕಿವಿಯೋಲೆಯನ್ನು ಕಳಚುವಂತೆ ಪೀಡಿಸಿದಾಗ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಗಾಬರಿಗೊಂಡ ಕಳ್ಳ ಪರಾರಿಯಾಗಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಪ್ರಕರಣ ದಾಖಲಾಗಿದೆ.
==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net