ಕೂಡ್ಲಿಗಿ ಶಾಸಕರ ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನ ಆಚರಿಸಲಾಯಿತು. ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಸಿಪಿಐ ಪ್ರಲ್ಹಾದ್ ಎಸ್.ಚನ್ನಗಿರಿ, ಶಾಸಕರ ಆಪ್ತ ಸಹಾಯಕ ಕಾವಲಿ ರಾಘವೇಂದ್ರ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಿಕ್ಷಕಿ
ಸಾವಿತ್ರಿಬಾಯಿ ಫುಲೆ
ಅಜ್ಞಾನದ ವಿರುದ್ಧ ಅಕ್ಷರವನ್ನೇ ಅಸ್ತ್ರವಾಗಿಸಿದ ಶಿಕ್ಷಕಿ
ಕೂಡ್ಲಿಗಿ: ಅಸ್ಪಶ್ಯತೆ ಮತ್ತು ಅಜ್ಞಾನದ ವಿರುದ್ಧ ಅಕ್ಷರವನ್ನೇ ಅಸ್ತ್ರವಾಗಿಸಿದ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಶಾಸಕರ ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ, ಸಮಾಜ ಸುಧಾರಣೆ ಮತ್ತು ಸ್ತ್ರೀ ಸಮಾನತೆಗಾಗಿ ಅವರ ತ್ಯಾಗ ಮತ್ತು ಹೋರಾಟ ಸದಾ ಸ್ಪೂರ್ತಿದಾಯಕ. ಹಿಂದೆ ಸಾವಿತ್ರಿಬಾಯಿ ಫುಲೆ ಹಚ್ಚಿದ ಜ್ಞಾನದೀಪ ಕೋಟ್ಯಂತರ ಹೆಣ್ಣುಮಕ್ಕಳ ಬಾಳಲ್ಲಿ ಬೆಳಕಾಗಿದೆ. ಶಿಕ್ಷಣ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ನಂತರ ಬ್ರಿಟಿಷರ ಆಡಳಿತದಲ್ಲಿ ಜ್ಯೋತಿಬಾಫುಲೆ ಅವರು ಶೂದ್ರರು ಮತ್ತು ಅತಿಶೂದ್ರರ ಶಿಕ್ಷಣಕ್ಕಾಗಿ ಮೊದಲ ಸಂಘಟನೆ ಆರಂಭಿಸಿದರು.
1840ರಲ್ಲಿ ಅಸ್ಪಶ್ಯ ಸಮುದಾಯದವರಿಗಾಗಿ ಪುಣೆಯಲ್ಲಿ ಶಾಲೆ ಆರಂಭಿಸಿದ ಫುಲೆ ಅವರ ಪ್ರಯತ್ನ ಸಂಪ್ರದಾಯಬದ್ದ ಶಕ್ತಿಗಳಿಂದ ವಿರೋಧಕ್ಕೆ ಗುರಿಯಾಯಿತು. ಹಿಂಜರಿಯದ ದಂಪತಿಗಳು 1851ರಲ್ಲಿ ಮಹಿಳೆಯರಿಗಾಗಿ ಶಾಲೆ ಆರಂಭಿಸಿದರು. ಮಹಿಳಾ ಶಿಕ್ಷಣದ ದೂರದೃಷ್ಟಿಯಿಂದ ಸಾವಿತ್ರಿಬಾಯಿ ಫುಲೆ ಅವರು ಸಮಾಜದ ಪರಿವರ್ತನೆಗೆ ಹೋರಾಡಿದರು ಎಂದರು.
ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಸಿಪಿಐ ಪ್ರಲ್ಹಾದ್ ಎಸ್.ಚನ್ನಗಿರಿ, ಶಾಸಕರ ಆಪ್ತ ಸಹಾಯಕ ಕಾವಲಿ ರಾಘವೇಂದ್ರ, ಪ್ರಮುಖರಾದ ಬಿ.ಕೆ.ರಾಘವೇಂದ್ರ, ಮಾರಪ್ಪ ಇತರರಿದ್ದರು.