ದೇಶದಲ್ಲೇ ರಾಜ್ಯ ಎರಡನೇ ಸ್ಥಾನ

ಬಳ್ಳಾರಿಯ ಬಿಮ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಹಾಲಿನ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಪ್ರಭುಶಂಕರ, ನಿರ್ದೇಶಕರಾದ ಎಸ್.ಸುದರ್ಶನ ರೆಡ್ಡಿ, ಜಿ.ಕೃಷ್ಣರೆಡ್ಡಿ, ಉಪ ವ್ಯವಸ್ಥಾಪಕ ಟಿ. ಮಲ್ಲಿಕಾರ್ಜುನ, ಮಾರುಕಟ್ಟೆ ಸಹಾಯಕರಾದ ಲೋಹಿತಕುಮಾರ, ಪ್ರಸನ್ನ ಕುಮಾರ, ಪ್ರೊ. ಡಾ.ರಮೇಶ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪೋಷಕಾಂಶಗಳ ಬಗ್ಗೆ ಜನರಲ್ಲಿ ಜಾಗೃತಿ
  • ದಿನಾಚರಣೆಯ ಮುಖ್ಯ ಉದ್ದೇಶ
ಬಳ್ಳಾರಿ : ರಾಜ್ಯದಿಂದಲೇ ಪ್ರತಿದಿನ ಬರೋಬ್ಬರಿ ಒಂದು ಕೋಟಿ ಹನ್ನೊಂದು ಲಕ್ಷ ಲೀ. ಗುಣಮಟ್ಟದ ಹಾಲನ್ನು ಶೇಖರಿಸಿ ಗ್ರಾಹಕರಿಗೆ ಯಶಸ್ವಿಯಾಗಿ ಸರಬರಾಜು ಮಾಡಲಾಗುತ್ತಿದೆ ಎಂದು ರಾಬಕೊವಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಪ್ರಭುಶಂಕರ ಹೇಳಿದರು. ನಗರದ ಬಿಮ್ಸ್ ಸಭಾಂಗಣದಲ್ಲಿ ರಾಬಕೊವಿ ಸಹಕಾರ ಹಾಲು ಒಕ್ಕೂಟದ ವತಿಯಿಂದ ಸೋಮವಾರ ಆಯೋಜಿಸಿದ್ದ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಮೂಲಕ ಭಾರತದಲ್ಲಿಯೇ ಅತಿ ಹೆಚ್ಚು ಹಾಲು ಸಂಗ್ರಹಣೆ ಮಾಡುವ ಎರಡನೇ ದೊಡ್ಡ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ ಎಂದರು.
ಒಕ್ಕೂಟದ ಉಪಾಧ್ಯಕ್ಷ ಎನ್.ಸತ್ಯನಾರಾಯಣ ಮಾತನಾಡಿ, ಡೈರಿ ಉದ್ಯಮಕ್ಕೆ ಸಂಬಂಧಿಸಿದ ಉಪಕ್ರಮಗಳ ಬಗ್ಗೆ ಅರಿವು ಮೂಡಿಸಿ ಮತ್ತು ಬೆಂಬಲಿಸುವುದು ಪ್ರಮುಖವಾಗಿದೆ. ಹಾಲಿನ ಉತ್ಪನ್ನಗಳಲ್ಲಿರುವ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ - ಬಿ2 ನಂತಹ ಪೋಷಕಾಂಶಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ವಿಶ್ವ ಹಾಲು ದಿನಾಚರಣೆಯ ಮುಖ್ಯ ಉದ್ದೇಶ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net