ಸರ್ವಜ್ಞರ ವಚನಗಳು ಜೀವನಕ್ಕೆ ಆದರ್ಶ

ಬಳ್ಳಾರಿಯಲ್ಲಿ ಆಯೋಜಿಸಿದ್ದ ಸಂತಕವಿ ಶ್ರೀ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಆಕಾಶವಾಣಿಯ ಉದ್ಘೋಷಕ ಅಮಾತಿ ಬಸವರಾಜ ಉದ್ಘಾಟಿಸಿದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಕರ್ನಾಟಕ ಜನಸೈನ್ಯ ಸಂಘದ ರಾಜ್ಯಾಧ್ಯಕ್ಷ ಎರ‌್ರಿಸ್ವಾಮಿ, ಸರ್ವಜ್ಞ ಮಹಿಳಾ ಸಂಘದ ಉಪಾಧ್ಯಕ್ಷೆ ಗೌರಮ್ಮ,  ಸಮಾಜದ ಮುಖಂಡರಾದ ಕೆ.ನರಸಯ್ಯ, ಕೆ.ರಂಗಸ್ವಾಮಿ, ಸತ್ಯನಾರಾಯಣ ಸ್ವಾಮಿ, ಶ್ರೀನಿವಾಸುಲು, ಗೋವಿಂದಸ್ವಾಮಿ ಇದ್ದರು

Published on

ಪ್ರಮುಖ ಮುಖ್ಯಾಂಶಗಳು

  • ಜೀವನ
ಬಳ್ಳಾರಿ : ಸರ್ವಜ್ಞರ ತ್ರಿಪದಿ ವಚನಗಳು ಜೀವನಕ್ಕೆ ಮಾರ್ಗದರ್ಶನವಾಗಿದೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳ ಕುರಿತವುಗಳಾಗಿವೆ ಎಂದು ಬಳ್ಳಾರಿ ಆಕಾಶವಾಣಿಯ ಉದ್ಘೋಷಕ ಅಮಾತಿ ಬಸವರಾಜ ಹೇಳಿದರು.
ನಗರದ ಸಾಂಸ್ಕೃತಿಕ ಸಮುಚ್ಛಯ ಹೊಂಗಿರಣ ಸಭಾಂಗಣದಲ್ಲಿ ಆಯೋಜಿಸಿದ್ದ ಸಂತಕವಿ ಶ್ರೀ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾವಿರಕ್ಕೂ ಅಧಿಕ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ವಚನಗಳ ಮೂಲಕ ಜನರು ಒಗ್ಗಟ್ಟು, ಒಮ್ಮತ, ಐಕ್ಯತೆ ಭಾವನೆಯಿಂದ ಕೂಡಿ ಬಾಳ್ವೆ ನಡೆಸಬೇಕು ಎಂದರು. ತ್ರಿಪದಿಗಳ ಬ್ರಹ್ಮ ಎಂದೇ ಹೆಸರಾದ ಸರ್ವಜ್ಞ, ತನ್ನ ಮೂರು ಸಾಲಿನ ವಚನಗಳಲ್ಲಿನ ತತ್ವಗಳ ಮೂಲಕ ಸಮಾಜಕ್ಕೆ ದಾರಿದೀಪವಾದವರು ಎಂದರು.
ಅನೇಕ ಸಾಧು- ಸಂತರು ತಾವು ಕಹಿ ಉಂಡು, ಜಗತ್ತಿಗೆ ಸಿಹಿ ನೀಡಿದ್ದಾರೆ. ವಚನಕಾಲದ ಶ್ರೇಷ್ಠ ದಾರ್ಶನಿಕ ವಚನಕಾರರಲ್ಲಿ ಸರ್ವಜ್ಞನು ಒಬ್ಬರಾಗಿದ್ದರು. ಗಾದೆ ಮಾತಿನಂತೆ ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞರು ರಚಿಸದ ವಚನಗಳಿಲ್ಲ. 21ನೇ ಶತಮಾನದಲ್ಲಿಯೂ ಸರ್ವಜ್ಞನ ವಚನಗಳು ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಜಾತಿ ವ್ಯವಸ್ಥೆ, ಅಂಧಶ್ರದ್ಧೆ, ದೌರ್ಜನ್ಯ, ಕಂದಾಚಾರ, ದಬ್ಬಾಳಿಕೆ , ಶೋಷಣೆ, ಮೌಢ್ಯತೆಗಳೆಂಬ ಅನಿಷ್ಟ ಪದ್ಧತಿ ಧಿಕ್ಕರಿಸಿ ಸಮ ಸಮಾಜದ ಪರಿಕಲ್ಪನೆ ಮುನ್ನೆಲೆಗೆ ತರುವ ಪ್ರಯತ್ನ ತಮ್ಮ ತ್ರಿಪದಿ ವಚನಗಳ ಮೂಲಕ ಸರ್ವಜ್ಞರು ಮಾಡಿದ್ದರು. ಅವರ ವಚನಗಳನ್ನು ಇಂದಿನ ಪೀಳಿಗೆಗೆ ತಲುಪಿಸಲು ರಾಜ್ಯ ಸರ್ಕಾರ ಜಯಂತಿ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ಹೇಳಿದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net