ಇಲ್ಲಿನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಅದಿರದಲ್ಲಿ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ತೊಗಲುಗೊಂಬೆ ಕಲಾವಿದ ದಿ. ಹುಲೆಪ್ಪನವರ ಸ್ಮರಣಾರ್ಥ ನಾನಾ ಕ್ಷೇತ್ರಗಳ ಸಾಧಕರಿಗೆ ರಾಜ್ಯಮಟ್ಟದ ‘ಹುಲಿಕುಂಟೆ ಶ್ರೀ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನರ ಆಶ್ರಯದಲ್ಲಿ ಬೆಳೆದ ತೊಗಲುಗೊಂಬೆ ಕಲೆಯನ್ನು ಖ್ಯಾತ ಹಿರಿಯ ಕಲಾವಿದ ಬೆಳಗಲ್ಲು ವೀರಣ್ಣ ಅವರು, ವಿವಿಧ ದೇಶಗಳಲ್ಲೂ ಪ್ರದರ್ಶಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದರು. ತೊಗಲುಗೊಂಬೆ ಕಲೆಯು ಅನಕ್ಷರಸ್ಥರಿಗೂ ರಾಮಾಯಣ, ಮಹಾಭಾರತ ಕಥೆಗಳನ್ನು ಪರಿಚಯಿಸಿತು. ಕೇವಲ ಬಸವಣ್ಣ ಕುರಿತು ಮಾತ್ರವಲ್ಲದೇ, ಸ್ವಾತಂತ್ರೃ ಹೋರಾಟಗಾರ ಮಹಾತ್ಮಗಾಂಧೀಜಿ, ಸಾಕ್ಷರತೆ, ಬಾಲ್ಯ ವಿವಾಹಗಳಂತಹ ಸಾಮಾಜಿಕ ಸಮಸ್ಯೆಗಳ ಕುರಿತು ಸಹ ತೊಗಲುಗೊಂಬೆ ನಾಟಕ ಪ್ರದರ್ಶಿಸಿದ ಶ್ರೇಯಸ್ಸು ಸಲ್ಲುತ್ತದೆ ಎಂದರು.