ಪ್ರಾಗೈತಿಹಾಸಿಕ ಸ್ಥಳಗಳ ರಕ್ಷಣೆ ನಮ್ಮೆಲ್ಲರ ಹೊಣೆ

ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಬಳಿ ಪ್ರಾಗೈತಿಹಾಸ ಸ್ಥಳದ ಉತ್ಖನನ ಪ್ರಕ್ರಿಯೆ ಕುರಿತು ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್, ತಹಸೀಲ್ದಾರ್ ಗೌಸೀಯಾ ಬೇಗಂ ಮಾಹಿತಿ ಪಡೆದರು. ಅಮೆರಿಕದ ಹಾರ್ಟ್ ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ಕಾರ್ಯದ ಸಹ ನಿರ್ದೇಶಕಿ ನಮಿತಾ ಎಸ್ ಸುಗಂಧಿ ಇತರರಿದ್ದರು.
ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಬಳಿ ಪ್ರಾಗೈತಿಹಾಸ ಸ್ಥಳದ ಉತ್ಖನನ ಪ್ರಕ್ರಿಯೆ ಕುರಿತು ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್, ತಹಸೀಲ್ದಾರ್ ಗೌಸೀಯಾ ಬೇಗಂ ಮಾಹಿತಿ ಪಡೆದರು. ಅಮೆರಿಕದ ಹಾರ್ಟ್ ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ಕಾರ್ಯದ ಸಹ ನಿರ್ದೇಶಕಿ ನಮಿತಾ ಎಸ್ ಸುಗಂಧಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್
  • ಗೌಸೀಯಾ ಬೇಗಂ
  • ಅನಿಸಿಕೆ
ಸಿರಗುಪ್ಪ: ಪ್ರಾಗೈತಿಹಾಸಿಕ ಸ್ಥಳಗಳು ನಮಗೆ ಪ್ರಾಚೀನ ಕಾಲದ ಜನರ ಜೀವನ ವಿಧಾನ, ಆಚರಣೆಗಳ ಕುರಿತು ಮಾಹಿತಿ ನೀಡುವಂತಹ ಪ್ರಮುಖ ಸ್ಥಳಗಳಾಗಿವೆ. ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ತಹಸೀಲ್ದಾರ್ ಗೌಸೀಯಾ ಬೇಗಂ ಹೇಳಿದರು.
ತೆಕ್ಕಲಕೋಟೆಯ ಉತ್ಖನನ ಸ್ಥಳದಲ್ಲಿ ದೊರೆಯುತ್ತಿರುವ ಅಸ್ಥಿ ಪಂಜರ ಮತ್ತು ವಿವಿಧ ಗಾತ್ರಗಳ ಮಡಕೆಗಳು ಹಾಗೂ ಚೂಪಾದ ಕಲ್ಲುಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು. ಉತ್ಖನನ ಸ್ಥಳಗಳಲ್ಲಿ ದೊರೆಯುತ್ತಿರುವ ಮಾಹಿತಿಯು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ. ನಮ್ಮ ಭಾಗದಲ್ಲಿ ಪ್ರಾಗೈತಿಹಾಸಿಕ ಕಾಲದಲ್ಲಿ ಜನರ ಜೀವನ ಶೈಲಿ ಬಗ್ಗೆ ತಿಳಿದುಕೊಳ್ಳುವಂತಹ ಕುರುಹುಗಳು ಸಿಗುತ್ತಿರುವುದರಿಂದ ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಪ್ರಾಗೈತಿಹಾಸ ಹೊಂದಿರುವ ಸ್ಥಳಗಳನ್ನು ಸರ್ಕಾರ ಮತ್ತು ಸ್ಥಳೀಯ ಪಟ್ಟಣ ಪಂಚಾಯಿತಿಯ ನಿರ್ಲಕ್ಷ್ಯ ಮಾಡಿರುವುದರಿಂದ ಅವುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊರತೆ ಇರುವುದರಿಂದ ಅವಶೇಷಗಳು ಅವನತಿ ಹೊಂದುತ್ತಿವೆ. ಆದ್ದರಿಂದ ಈ ಸ್ಥಳಗಳನ್ನು ರಕ್ಷಿಸಲು ಸೂಚನಾ ಫಲಕಗಳನ್ನು ಅಳವಡಿಸಬೇಕೆಂದು ಸ್ಥಳೀಯ ಸಿದ್ದೇಶ್ವರ ಎಸ್. ತಹಸೀಲ್ದಾರ್‌ಗೆ ಮನವಿ ಮಾಡಿದರು.
ತಹಸೀಲ್ದಾರ್ ಗೌಸೀಯಾ ಬೇಗಂ ಅವರು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಜತೆ ಮಾತನಾಡಿ, ಸೂಚನಾ ಫಲಕಗಳನ್ನು ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಉತ್ಖನನ ಸ್ಥಳಕ್ಕೆ ಎಸ್ಪಿ ಡಾ.ಸುಮನ್ ಡಿ. ಪನ್ನೇಕರ್ ಭೇಟಿ ನೀಡಿ ಮಾಹಿತಿ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net