ಬಡವರಿಂದ ಶಿಕ್ಷಣ ಕಸಿಯುವ ಹುನ್ನಾರ

ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ವಿರೋಧಿಸಿ ಹಗರಿಬೊಮ್ಮನಹಳ್ಳಿ ತಾಲೂಕಿನ ಓಬಳಾಪುರ ಸರ್ಕಾರಿ ಶಾಲೆ ಆವರಣದಲ್ಲಿ ಎಸ್‌ಎಫ್‌ಐದಿಂದ ಜನಜಾಗೃತಿ ಮೂಡಿಸಲಾಯಿತು. ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಜಯಸೂರ್ಯ, ಪ್ರಮುಖರಾದ ನರಸಿಂಹರಾಜ, ರಮೇಶ, ಕರಿಯಪ್ಪ, ಹನುಮಂತ ಸ್ವಾಮಿ, ತಿಪ್ಪೇಸ್ವಾಮಿ, ಬಸವರಾಜ, ಕುಮಾರಪ್ಪ, ನಾಗರಾಜ, ಜ್ಞಾನೇಶ, ಪವಾಡಪ್ಪ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಎಸ್‌ಎಫ್‌ಐ ವಿರೋಧ
  • ಹಗರಿಬೊಮ್ಮನಹಳ್ಳಿ ಗುಳೇದಾಳ್ ಓಬಳಾಪುರ ಜನಜಾಗೃತಿ
ಹಗರಿಬೊಮ್ಮನಹಳ್ಳಿ: ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ತಾಲೂಕಿನ ಗುಳೇದಾಳ್ ಮತ್ತು ಓಬಳಾಪುರ ಗ್ರಾಮದ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಜಯಸೂರ್ಯ ಆಕ್ರೋಶ ವ್ಯಕ್ತಪಡಿಸಿದರು.
ಗುಳೇದಾಳ್ ಮತ್ತು ಓಬಳಾಪುರ ಸರ್ಕಾರಿ ಶಾಲೆಗಳ ಮುಂದೆ ಶುಕ್ರವಾರ ಎಸ್‌ಎಫ್‌ಐ ನೇತೃತ್ವದಲ್ಲಿ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಗ್ರಾಮದ ಶಾಲೆಗಳು ನಮ್ಮ ಊರಿನಲ್ಲೇ ಇರಬೇಕು. ಊರಿನ ಶಾಲೆಗಳನ್ನು ಉನ್ನತೀಕರಿಸುವ ನೆಪದಲ್ಲಿ ಮುಚ್ಚಲು ಮುಂದಾಗಿರುವುದು ಸರಿಯಲ್ಲ.
ಸಾಮಾಜಿಕ ಬದಲಾವಣೆ ಹೆಸರಿನಲ್ಲಿ ಶಿಕ್ಷಣವನ್ನು ಬಡವರ ಕೈಯಿಂದ ಕಸಿದುಕೊಳ್ಳುವ ಹುನ್ನಾರವನ್ನು ಸರ್ಕಾರ ನಡೆಸಿದೆ. ಸಮಾಜವಾದವನ್ನು ಪ್ರತಿಪಾದಿಸುವ ಸಿಎಂ ಸಿದ್ಧರಾಮಯ್ಯ ಶಿಕ್ಷಣದಲ್ಲಿ ಈ ರೀತಿಯ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದರು.
ಗುಳೇದಾಳ್ ಗ್ರಾಮದ ಎ.ಕೆ.ಕೃಷ್ಣಪ್ಪ, ದುರ್ಗೇಶ, ನಿಂಗರಾಜ, ಧರ್ಮಪ್ಪ, ಪೂಜಾರಿ ರಾಮೇಶ, ಪದ್ದಮ್ಮ, ಸುಮಂಗಳಾ, ಗಂಗಮ್ಮ, ಗುಂಡ್ರ ನಿಂಗಜ್ಜ, ತಳವಾರ್ ಹೇಮಣ್ಣ, ಜಟಂಗಿ ಶಿವಣ್ಣ, ಬಣಕಾರ್ ಮಲ್ಲೇಶ, ವೆಂಕಟೇಶ, ಮಹಾಂತೇಶ, ಗೋಣಿಸ್ವಾಮಿ, ಕಲ್ಲೇಶ ಅವಾಜಿ, ಬಸವರಾಜ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net