ತತ್ವಪದ ಜನ ಮನ್ನಣೆ ಪಡೆದಿವೆ

ಬಳ್ಳಾರಿಯ ಬಂಡಿಹಟ್ಟಿಯ ರಾಮನಗರದ ಗಿರಿಜಪ್ಪ ಅವಧೂತ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಯಮಿ ಕೊರಲಗುಂದಿ ಬಸವನಗೌಡ ತಮಟೆ ಬಾರಿಸುವ ಉದ್ಘಾಟಿಸಿದರು. ಉದ್ಯಮಿ ವೈ.ಮಾರುತಿ, ಸಪ್ತಸ್ವರ ಸಾಂಸ್ಕೃತಿಕ ಬಯಲಾಟ ಕಲೆ ಟ್ರಸ್ಟ್ ಉಪಾಧ್ಯಕ್ಷೆ ಜಯಲಕ್ಷ್ಮಿ, ಟ್ರಸ್ಟ್ ಅಧ್ಯಕ್ಷ ಸುಬ್ಬಣ್ಣ, ಕಲಾವಿದ ತಿಪ್ಪೇಸ್ವಾಮಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಉದ್ಯಮಿ
ಬಳ್ಳಾರಿ : ಜನಪದ ತತ್ವಪದಗಳು ಈಗಿನ ಆಧುನಿಕ ಕಾಲದಲ್ಲಿ ಜನ ಮನ್ನಣೆಗಳಿಸಿವೆ ಎಂದು ಉದ್ಯಮಿ ಕೊರಲಗುಂದಿ ಬಸವನಗೌಡ ಹೇಳಿದರು.
ಇಲ್ಲಿನ ಬಂಡಿಹಟ್ಟಿಯ ರಾಮನಗರದ ಗಿರಿಜಪ್ಪ ಅವಧೂತ ಮಠದಲ್ಲಿ ಮಾರುತಿ ತೊಗಲು ಗೊಂಬೆ ಕಲಾ ಟ್ರಸ್ಟ್‌ದಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಪದ ತತ್ವಗಳಲ್ಲಿ ಸಾಹಿತ್ಯದ ಗಟ್ಟಿತನ, ಮನುಷ್ಯನ ಬದುಕಿನ ಮೋಕ್ಷದ ಮಾರ್ಗಗಳಾದ ದುಡಿಮೆ, ಧಾನ, ಧರ್ಮ, ಗುರು ಶಿಷ್ಯ ಪರಂಪರೆ ಬೋಧಿಸುವುದು ಕಂಡು ಬಂದಿವೆ. ಹೀಗಾಗಿ ಜನಪದ ತತ್ವಪದ ಜಗತ್ತು ಇರುವರೆಗೂ ಶಾಶ್ವತವಾಗಿ ಸರ್ವಕಾಲಕ್ಕೂ ಬದುಕಿನ ಸತ್ಯ ಹೇಳುತ್ತವೆ ಎಂದು ಹೇಳಿದರು.
ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಯಲ್ಲನಗೌಡ ಶಂಕರ ಬಂಡೆ ಮಾತನಾಡಿ, ಶರೀಫರ ತತ್ವಪದಗಳು ಮತ್ತು ಅವರ ಗುರು ಶಿಷ್ಯ ಪರಂಪರೆ ಮೋಕ್ಷ ಮಾರ್ಗದ ಸಾರವನ್ನು ಅಂದಿನ ಕಾಲದಲ್ಲಿ ಜಾತಿ ಧರ್ಮ ಮೀರಿ ಭಾವೈಕ್ಯತೆಯ ಭಾಗವಾಗಿ ಬೆಳೆದವು ಎಂದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net