ಹೊಡೆತಕ್ಕೆ ಹೆದರಿ ತಾವು ಮುಸ್ಲಿಮರು ಎಂದು ಮೊದಲು ಹೇಳಿಕೊಂಡರಾದರೂ, ಅವರ ಆಧಾರ್ ಕಾರ್ಡ್ ಪರಿಶೀಲಿಸಿದಾಗ ರಘು ಮತ್ತು ಅಜಯ್ ಎಂಬ ಹೆಸರು ಗಳು ಇದ್ದವು. ಕೂಡಲೇ ವಂಚಿಸಿದ್ದ ಹಣವನ್ನು ಮಹಿಳೆಯರಿಗೆ ಮರಳಿಸಿದ ಗ್ರಾಮಸ್ಥರು, ವಶದಲ್ಲಿದ್ದ ಇಬ್ಬರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಪೊಲೀಸ್ ಠಾಣೆಗೆ ಒಪ್ಪಿಸಲು ಮುಂದಾದಾಗ ಆ ಇಬ್ಬರು ದಾರಿಯಲ್ಲೇ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಅಪರಿಚಿತರು ಜ್ಯೋತಿಷದ ಹೆಸರಲ್ಲಿ ಬಂದರೆ ಜನರು ಜಾಗೃತರಾಗಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.