ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ

ಬಳ್ಳಾರಿಯ ತಾರಾನಾಥ ಕಾಲೇಜು ಆವರಣದಲ್ಲಿ ಸಂಸ್ಥೆ ಸಂಸ್ಥಾಪಕ ವೈದ್ಯರತ್ನ ಪಂಡಿತ್ ತಾರಾನಾಥ್ ಅವರ ಕಂಚಿನ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಪ್ರಾಂಶುಪಾಲ ಡಾ.ರಾಜಶೇಖರ್ ಎಸ್.ಗಾಣಿಗೇರ, ವೈದ್ಯಾದಿಕಾರಿಗಳಾದ ಡಾ.ಎಸ್.ಎಂ.ಕೊಟ್ರೇಶ್, ಡಾ. ಕೃಷ್ಣ ನಾಯಕ್, ಡಾ. ಶಿವು ಅರಕೆರಿ, ಅಶ್ವಿನಿ ಹಳ್ಳದ್, ಡಾ. ಮಮತಶ್ರೀ ಇದ್ದರು.
ಬಳ್ಳಾರಿಯ ತಾರಾನಾಥ ಕಾಲೇಜು ಆವರಣದಲ್ಲಿ ಸಂಸ್ಥೆ ಸಂಸ್ಥಾಪಕ ವೈದ್ಯರತ್ನ ಪಂಡಿತ್ ತಾರಾನಾಥ್ ಅವರ ಕಂಚಿನ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಪ್ರಾಂಶುಪಾಲ ಡಾ.ರಾಜಶೇಖರ್ ಎಸ್.ಗಾಣಿಗೇರ, ವೈದ್ಯಾದಿಕಾರಿಗಳಾದ ಡಾ.ಎಸ್.ಎಂ.ಕೊಟ್ರೇಶ್, ಡಾ. ಕೃಷ್ಣ ನಾಯಕ್, ಡಾ. ಶಿವು ಅರಕೆರಿ, ಅಶ್ವಿನಿ ಹಳ್ಳದ್, ಡಾ. ಮಮತಶ್ರೀ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸ್ಥೆಯ ಪರಿವರ್ತನೆಯ ಪಯಣ
ಬಳ್ಳಾರಿ : ಅತ್ಯಂತ ಸರಳ ಕನಸಿನೊಂದಿಗೆ ಆರಂಭವಾದ ಸಂಸ್ಥೆಯೂ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಸೈಯದ್ ಅತ್ತಾರ್ ಫಾತಿಮಾ ಹೇಳಿದರು. ನಗರದ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸರ್ಕಾರಿ ಸೇವೆಯು 50 ವರ್ಷ ಪೂರೈಸಿರುವ ಹಿನ್ನಲೆ ಆಯೋಜಿಸಿದ್ದ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಇಂದು ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಆಯುರ್ವೇದ ಸೇವೆ ಸಲ್ಲಿಸುತ್ತಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಈ ಸಂಭ್ರಮವು ಕೇವಲ ಐವತ್ತು ವರ್ಷಗಳ ಆಚರಣೆಯಲ್ಲ, ಬದಲಾಗಿ ಶತಮಾನೋತ್ಸವದತ್ತ ಸಾಗುತ್ತಿರುವ ಸಂಸ್ಥೆಯ ಪರಿವರ್ತನೆಯ ಪಯಣವಾಗಿದೆ ಎಂದರು.
ಕಾಲೇಜು ಪ್ರಾಂಶುಪಾಲ ಡಾ. ರಾಜಶೇಖರ್ ಎಸ್. ಗಾಣಿಗೇರ ಮಾತನಾಡಿ, ಈ ಸುವರ್ಣ ಸಂಭ್ರಮವು ಸಂಸ್ಥೆಯ ಸುದೀರ್ಘ ಸಾಧನೆಗಳನ್ನು ಸ್ಮರಿಸುವುದರ ಜೊತೆಗೆ ಶತಮಾನೋತ್ಸವದತ್ತ ಸಾಗುವ ಅಭಿವೃದ್ಧಿಯ ಪಯಣಕ್ಕೆ ಹೊಸ ದಿಕ್ಕು ನೀಡಲಿದೆ. ಸುವರ್ಣ ಸಂಭ್ರಮದ ಅಂಗವಾಗಿ ನಡೆದ ಈ ಭೂಮಿಪೂಜೆಯು ಸಂಸ್ಥೆಯ ಇತಿಹಾಸದಲ್ಲೇ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ಹಲವಾರು ಏಳು-ಬೀಳುಗಳನ್ನು ದಾಟಿ ಹೆಮ್ಮರವಾಗಿ ಬೆಳೆದಿರುವ ಈ ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಯುರ್ವೇದ ಶಿಕ್ಷಣ ಹಾಗೂ ಲಕ್ಷಾಂತರ ರೋಗಿಗಳಿಗೆ ಆರೋಗ್ಯ ಸೇವೆ ನೀಡುವ ಮೂಲಕ ಸಮಾಜದಲ್ಲಿ ವಿಶಿಷ್ಟ ಸ್ಥಾನ ಗಳಿಸಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ವೈದ್ಯರತ್ನ ಪಂಡಿತ್ ತಾರಾನಾಥ್ ಅವರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಆವರಣದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net