ಶರಣ ಸಾಹಿತ್ಯ ಚಿಂತನೆ ಅಳವಡಿಕೆ ಅಗತ್ಯ

ಕಂಪ್ಲಿಯಲ್ಲಿ ಆಯೋಜಿಸಿದ್ದ ಮಹಾಮನೆ ಕಾರ್ಯಕ್ರಮದಲ್ಲಿ ಇಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಚಂದ್ರಯ್ಯ ಸೊಪ್ಪಿಮಠ ಮಾತನಾಡಿದರು. ಪ್ರಮುಖರಾದ ಜಿ.ಪ್ರಕಾಶ, ಬಿ.ಎಚ್.ಎಂ.ಚಂದ್ರಮಹೇಶಶಾಸ್ತ್ರಿ, ಕೆ.ಚಂದ್ರಶೇಖರ ಇತರರಿದ್ದರು.
ಕಂಪ್ಲಿಯಲ್ಲಿ ಆಯೋಜಿಸಿದ್ದ ಮಹಾಮನೆ ಕಾರ್ಯಕ್ರಮದಲ್ಲಿ ಇಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಚಂದ್ರಯ್ಯ ಸೊಪ್ಪಿಮಠ ಮಾತನಾಡಿದರು. ಪ್ರಮುಖರಾದ ಜಿ.ಪ್ರಕಾಶ, ಬಿ.ಎಚ್.ಎಂ.ಚಂದ್ರಮಹೇಶಶಾಸ್ತ್ರಿ, ಕೆ.ಚಂದ್ರಶೇಖರ ಇತರರಿದ್ದರು.
Published on
ಕಂಪ್ಲಿ: ಶರಣ ತತ್ವ ಚಿಂತನೆಗಳ ಕೊರತೆಯಿಂದ ಜಗತ್ತಿನಲ್ಲಿ ಯುದ್ಧ ನಡೆಯುತ್ತಿವೆ ಎಂದು ಇಟಗಿ ಸಹಿಪ್ರಾ ಶಾಲೆ ಮುಖ್ಯಶಿಕ್ಷಕ ಚಂದ್ರಯ್ಯ ಸೊಪ್ಪಿಮಠ ಹೇಳಿದರು.
ಪಟ್ಟಣದ ಗಂಗಾಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತನಿಂದ ಹಮ್ಮಿಕೊಂಡಿದ್ದ 188ನೇ ಮಹಾಮನೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಸಮಾಜ ಒಡೆಯುವ ಕೆಲಸವನ್ನು ಯಾರೂ ಮಾಡಬಾರದು. ಸಮಾಜದಲ್ಲಿ ಉತ್ತಮ ವಾತಾವರಣ ಮೂಡಿಸಲು ಶರಣ ಸಾಹಿತ್ಯ ಚಿಂತನೆ ಮತ್ತು ಅಳವಡಿಕೆ ಅಗತ್ಯ ಎಂದರು. ಬಿ.ಎಚ್.ಎಂ. ಚಂದ್ರಮಹೇಶ ಶಾಸ್ತ್ರಿ ಶರಣ ವಿಚಾರಧಾರೆ ಕುರಿತು ಮಾತನಾಡಿ, ಸಮಾಜ ತಿದ್ದುವಲ್ಲಿ ವಚನಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.
ಪರಿಷತ್ತಿನ ತಾಲೂಕು ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯಶಿಕ್ಷಕ ಕೆ.ಚಂದ್ರ ಶೇಖರ್, ಪರಿಷತ್ ತಾಲೂಕು ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪ್ರಮುಖರಾದ ಎಸ್.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಅಂಬಿಗರ ಮಂಜುನಾಥ, ಅಶೋಕ ಕುಕನೂರು, ಸಜ್ಜೇದ ವೀರಭದ್ರಪ್ಪ, ಎಸ್.ರಾಮಪ್ಪ, ಮಡಿವಾಳ ಹುಲುಗಪ್ಪ, ಟಿ.ನಿರಂಜನಸ್ವಾಮಿ, ಬಿ.ಎಂ.ರುದ್ರಯ್ಯ, ಸಿ.ಕೆ.ಚಿದಾಂಬರ, ಕೆ. ಯಂಕಾರೆಡ್ಡಿ, ಯು.ಎಂ.ವಿದ್ಯಾಶಂಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net