ಕಚೇರಿಗಳಲ್ಲಿ ನೆಟ್ ಇಲ್ಲದೆ, ಇತ್ತ ಫ್ಯಾನ್ ಕೂಡ ಇಲ್ಲದೆ ಬೇಸತ್ತ ಅಧಿಕಾರಿಗಳು ಕಚೇರಿಯಿಂದ ಹೊರಗಡೆ ಅಲೆದಾಡುತ್ತಿರುವುದು ಕಂಡುಬಂತು. ಇನ್ನೂ ಮಧ್ಯಾಹ್ನವಾಗುತ್ತಿದ್ದಂತೆ ಬಹುತೇಕ ಅಧಿಕಾರಿಗಳು ಮನೆಗಳತ್ತ ಮುಖ ಮಾಡಿದರು. ನಗರದ ನಾನಾ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳು, ಶಾಲಾ ಮೈದಾನ, ಜಿಲ್ಲಾ ಕ್ರೀಡಾಂಗಣ ಹಾಗೂ ಸರ್ಕಾರಿ ಕಚೇರಿಗಳ ಆವರಣಗಳು ಜಲಾವೃತಗೊಂಡು ಕೆರೆಗಳಂತೆ ಭಾಸವಾಗುತ್ತಿದ್ದವು.