ಸಂಘದ ಅಧ್ಯಕ್ಷ ಎ.ರಾಮಕೃಷ್ಣಯ್ಯ, ನಿರ್ದೇಶಕರಾದ ಮುರಳಿ, ಸಿ.ಕೊನಯ್ಯ, ಆರ್.ಕಿರಿಟಪ್ಪ, ಸೀಲಾ ಚಿನ್ನಬ್ರಹ್ಮಯ್ಯ, ವದ್ದಿ ಲಕ್ಷ್ಮೀದೇವಿ, ಲಕ್ಷ್ಮೀ ಪ್ರೇಮಿಳಾ, ಪದ್ಮಾವತಿ, ಎಸ್.ಲಕ್ಷೀದೇವಿ, ಜಿಂಕ ಲಕ್ಷ್ಮೀದೇವಿ, ಕೆ.ಎನ್.ರಾಜ ಸೇರಿ ಒಟ್ಟು ಹನ್ನೊಂದು ಜನರನ್ನು ಗುರುವಾರದಂದು ವಜಾಗೊಳಿಸಲಾಗಿದೆ. ಪ್ರಮುಖ ಅಕ್ರಮದ ಆರೋಪಗಳು : ಸಂಘಕ್ಕೆ ಸೇರಿದ ಜಾಗವನ್ನು ಕರಾರು ಪತ್ರಗಳ ಮೂಲಕ ನಿಯಮಬಾಹಿರವಾಗಿ ಸದಸ್ಯರಿಗೆ ಹಂಚಿಕೆ ಮಾಡಿ ನೋಂದಣಿ ಮಾಡಿಸಿರುವುದು ಕಂಡುಬಂದಿದೆ. ಸಂಘದ ಒಟ್ಟು 20 ಮಳಿಗೆಗಳ ಪೈಕಿ 18 ಮಳಿಗೆಗಳಿಂದ ನಿಯಮಾನುಸಾರ ಸೂಕ್ತ ಬಾಡಿಗೆ ವಸೂಲಿ ಮಾಡದೆ 14 ಲಕ್ಷ ರೂ. ಬಾಕಿ ಉಳಿಸಿಕೊಂಡು ಸಂಘಕ್ಕೆ ಭಾರಿ ಆರ್ಥಿಕ ನಷ್ಟ ಉಂಟುಮಾಡಲಾಗಿದೆ.