ಗ್ರಾಮಗಳ ಅಭಿವೃದ್ಧಿಯೇ ಮುಖ್ಯ ಉದ್ದೇಶ

ಕಾನಹೊಸಹಳ್ಳಿ ಸಮೀಪದ ಓಳಶೆಟ್ಟಿಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು. ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ಜಿಪಂ ಎಇಇ ಮಲ್ಲಿಕಾರ್ಜುನ ಸ್ವಾಮಿ, ಪ್ರಮುಖರಾದ ತಳವಾರ ಶರಣಪ್ಪ, ಬಣವಿಕಲ್ಲು ಎರ‌್ರಿಸ್ವಾಮಿ, ಬುಡ್ಡಾರೆಡ್ಡಿ ಇತರರಿದ್ದರು.
ಕಾನಹೊಸಹಳ್ಳಿ ಸಮೀಪದ ಓಳಶೆಟ್ಟಿಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು. ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ಜಿಪಂ ಎಇಇ ಮಲ್ಲಿಕಾರ್ಜುನ ಸ್ವಾಮಿ, ಪ್ರಮುಖರಾದ ತಳವಾರ ಶರಣಪ್ಪ, ಬಣವಿಕಲ್ಲು ಎರ‌್ರಿಸ್ವಾಮಿ, ಬುಡ್ಡಾರೆಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಮಗಾರಿಗೆ ಭೂಮಿಪೂಜೆ
  • ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿಕೆ
ಕಾನಹೊಸಹಳ್ಳಿ: ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಕುಡಿವ ನೀರು, ರಸ್ತೆ, ವಿದ್ಯುತ್, ಶಿಕ್ಷಣ, ಆರೋಗ್ಯ ಕೇಂದ್ರ ಸೇರಿ ಮೂಲಸೌಕರ್ಯ ಕಲ್ಪಿಸುವುದೇ ನನ್ನ ಉದ್ದೇಶ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಸಮೀಪದ ಓಳಶೆಟ್ಟಿಹಳ್ಳಿ ಗ್ರಾಮದಲ್ಲಿ 50 ಲಕ್ಷ ವೆಚ್ಚದ ಸಹಿಪ್ರಾ ಶಾಲೆಯ ಕ್ರೀಡಾಂಗಣ ಅಭಿವೃದ್ಧಿ, ಶೌಚಾಲಯ ಹಾಗೂ ಬಯಲು ರಂಗಮಂದಿರ ಮತ್ತು ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ಭಾಗದ ಬಡಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ.
ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದು ಸಾರ್ವಜನಿಕರಿಂದ ಕುಂದುಕೊರತೆ ಆಲಿಸುತ್ತಿರುವೆ. ಜನರ ಮನವಿಗಳನ್ನು ಪರಿಶೀಲಿಸಿ ಆಯಾ ಇಲಾಖೆ ಮೂಲಕ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ್ದು, ಶಾಲೆಗಳಲ್ಲಿ ಕೊಠಡಿಗಳ ದುರಸ್ತಿ ಹಾಗೂ ಉನ್ನತೀಕರಣ ಮಾಡಲಾಗುತ್ತಿದೆ ಎಂದರು.
ಮ್ಯಾಸರಹಟ್ಟಿ ಗ್ರಾಮದಲ್ಲಿ 15 ಲಕ್ಷ ರೂ., ಹುರುಳಿಹಾಳ್ ಗ್ರಾಮದಲ್ಲಿ 45.86 ಲಕ್ಷ ರೂ., ಶಾಲಾ ಕಾಂಪೌಂಡ್ 20ಲಕ್ಷ ರೂ., ಓಬಳಾಪುರ ಗ್ರಾಮದಲ್ಲಿ 15.00 ಲಕ್ಷ ರೂ., ಮೇಗಳಕರ್ನಾರಹಟ್ಟಿ 30 ಲಕ್ಷ ರೂ., ಕೆಳಗಿನ ಕರ್ನಾರಹಟ್ಟಿ 20 ಲಕ್ಷ ರೂ., ಎಚ್.ಪಿ.ಹಟ್ಟಿ ಸಕಿಪ್ರಾ ಶಾಲೆ ದುರಸ್ತಿ/ಕಾಂಪೌಂಡ್, ಶೌಚಾಲಯ ನಿರ್ಮಾಣಕ್ಕೆ 10 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ನಿವೃತ್ತಿ ಇಒ ಬಸಣ್ಣ, ನಿವೃತ್ತ ಶಿಕ್ಷಕ ಸೋಮಶೇಖರ, ಪ್ರಮುಖರಾದ ಬುಡ್ಡಾರೆಡ್ಡಿ, ಬಣವಿಕಲ್ಲು ಎರಿಸ್ವಾಮಿ, ಸಿಡೇಗಲ್ಲು ಬಸವರಾಜ್, ಸುರೇಶ್, ಅಂಗಡಿ ಬೋರಣ್ಣ, ಕೆ.ಪಿ.ಬೋರಯ್ಯ, ಬಸವರಾಜ್, ಲಕ್ಷ್ಮಣ್ಣ, ನಾಗರಾಜ, ಓಬಳೇಶ್, ದುರುಗಪ್ಪ, ಮಹಾಲಿಂಗಪ್ಪ, ರಾಮಕೃಷ್ಣಪ್ಪ, ಸಣ್ಣಮಲ್ಲಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net