ಬೆಂಕಿ ತಗುಲಿ ಹುಲ್ಲಿನ ಬಣವೆಗಳು ಭಸ್ಮ

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯ ಹೊರಗಿನ ವಲಯದಲ್ಲಿ ಭತ್ತದ ಹುಲ್ಲಿನ ಬಣವೆಗಳಿಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟಿವೆ.ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯ ಹೊರಗಿನ ವಲಯದಲ್ಲಿ ಭತ್ತದ ಹುಲ್ಲಿನ ಬಣವೆಗಳಿಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟಿವೆ.

Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್ ತಂತಿ ತಾಕಿ ಕಿಡಿ
  • ಶಾಸಕ ಕೆ.ನೇಮಿರಾಜ ನಾಯ್ಕ ಭೇಟಿ
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿಯಲ್ಲಿ ಶನಿವಾರ ಭತ್ತದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಭಸ್ಮವಾಗಿದೆ. ಗ್ರಾಮದ ಹೊರವಲಯದಲ್ಲಿ ಗ್ರಾಮದ ಬಾಚಿಗೊಂಡನಹಳ್ಳಿ ಬಸವರಾಜ, ಸುಣಗಾರ ಮಾರುತೇಶ, ಮೇಗಳ ಮನಿ ತೋಟಪ್ಪ, ಕೆ.ಯರಿಸ್ವಾಮಿ ಇವರಿಗೆ ಸೇರಿದ್ದ ನಾಲ್ಕು ಭತ್ತದ ಹುಲ್ಲಿನ ಬಣವೆಗೆ ವಿದ್ಯುತ್ ತಂತಿ ತಾಕಿ ಕಿಡಿ ಬಿದಿದ್ದರಿಂದ ಸಂಪೂರ್ಣ ಸುಟ್ಟಿವೆ.
ಸಮೀಪದ ಶೀಗೇನಹಳ್ಳಿಯಲ್ಲಿ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಇದೇ ಮಾರ್ಗವಾಗಿ ಹೊರಟಿದ್ದ ಶಾಸಕ ಕೆ.ನೇಮಿರಾಜ ನಾಯ್ಕ ಈ ಘಟನೆಯನ್ನು ನೋಡಿ ಕೂಡಲೇ ಅಗ್ನಿ ಶಾಮಕದಳ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ತಹಸೀಲ್ದಾರ್ ಹಾಗೂ ಜೆಸ್ಕಾಂ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ, ಸರ್ಕಾರದಿಂದ ಪರಿಹಾರ ನೀಡಲು ಕ್ರಮ ಕೈಗೊಳ್ಳಿ ಎಂದು ಆದೇಶಿಸಿದರು. ಅಗ್ನಿ ಶಾಮಕದಳದ ಸಿಬ್ಬಂದಿ ಬರುವ ವೇಳೆಗೆ ಬಣವೆಗಳು ಸಂಪೂರ್ಣ ಸುಟ್ಟಿದ್ದವು. ಆದರೆ, ವಿಪರಿತ ಗಾಳಿಯಿಂದ ಪಕ್ಕದ ಕಣಗಳಿಗೆ ತಗಲುವ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net