ದೇವಿಯರ ಗಂಗೆಸ್ಥಳ ಮೆರವಣಿಗೆ ಅದ್ದೂರಿ

ಕಂಪ್ಲಿಯಲ್ಲಿ ತಳವಾರ ಓಣಿಯ ಶ್ರೀ ಮಹಾದೇವಿ, ಯಲ್ಲಮ್ಮ, ಮಾರೆಮ್ಮ, ಹುಲಿಗೆಮ್ಮದೇವಿಯರ ಗಂಗೆಸ್ಥಳ ಮೆರವಣಿಗೆ ಜರುಗಿತು. ಪ್ರಮುಖರಾದ ಅಯ್ಯೋದಿ ವೆಂಕಟೇಶ, ಎಲಿಗಾರ ನಾಗರಾಜ, ಟಿ.ಗಂಗಣ್ಣ, ಜೆ.ಪ್ರಕಾಶ್, ಬಿ.ಸಿದ್ದಪ್ಪ ಇತರರಿದ್ದರು.
ಕಂಪ್ಲಿಯಲ್ಲಿ ತಳವಾರ ಓಣಿಯ ಶ್ರೀ ಮಹಾದೇವಿ, ಯಲ್ಲಮ್ಮ, ಮಾರೆಮ್ಮ, ಹುಲಿಗೆಮ್ಮದೇವಿಯರ ಗಂಗೆಸ್ಥಳ ಮೆರವಣಿಗೆ ಜರುಗಿತು. ಪ್ರಮುಖರಾದ ಅಯ್ಯೋದಿ ವೆಂಕಟೇಶ, ಎಲಿಗಾರ ನಾಗರಾಜ, ಟಿ.ಗಂಗಣ್ಣ, ಜೆ.ಪ್ರಕಾಶ್, ಬಿ.ಸಿದ್ದಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮೃದ್ಧ ಮಳೆ-ಬೆಳೆಗಾಗಿ ಪ್ರಾರ್ಥನೆ
  • ನಾನಾ ಕಲಾತಂಡಗಳ ಆಕರ್ಷಣೆ
ಕಂಪ್ಲಿ: ಸಮೃದ್ಧ ಮಳೆ, ಬೆಳೆಗೆ ಸಂಕಲ್ಪಿಸಿ ತಳವಾರ ಓಣಿಯ ಶ್ರೀ ಮಹಾದೇವಿ, ಯಲ್ಲಮ್ಮ, ಮಾರೆಮ್ಮ, ಹುಲಿಗೆಮ್ಮ ದೇವಿಯರ ಐದು ವರ್ಷಕ್ಕೊಮ್ಮೆ ನಡೆವ ಗಂಗೆಸ್ಥಳ ಮೆರವಣಿಗೆ ಮಂಗಳವಾರ ಶ್ರದ್ಧೆ-ಭಕ್ತಿಯಿಂದ ಜರುಗಿತು.
ತುಂಗಭದ್ರಾ ನದಿಯಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಉಡಪಿಯ ಚಂಡಿ ವಾದ್ಯ, ಕೊಟ್ಟೂರಿನ ನಂದಿಕೋಲು, ಮಲಪನಗುಡಿಯ ಡೊಳ್ಳು, ಕಂಪ್ಲಿಯ ತಾಷಾ ರಾಂಡೋಲು, ಹೇರೂರು ವಿರುಪಣ್ಣತಾತನ ಭಜನಾ ಮಂಡಳಿಯವರು ಪಾಲ್ಗೊಂಡಿದ್ದರು.
ಅನ್ನಸಂತರ್ಪಣೆ ಸೇರಿ ಆಧ್ಯಾತ್ಮಿಕ ಧಾರ್ಮಿಕ ಕಾರ್ಯಕ್ರಮ ಜರುಗಿದವು. ತಾಲೂಕು ಗಂಗಾಮತ ಸಮಾಜ ಅಧ್ಯಕ್ಷ ಎಲಿಗಾರ ನಾಗರಾಜ, ಅಂಬಿಗರ ಚೌಡಯ್ಯ ಯುವಕರ ಸಂಘದ ಅಧ್ಯಕ್ಷ ಜೆ.ಪ್ರಕಾಶ, ಯಲ್ಲಮ್ಮ ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಅಯೋಧಿ ದೊಡ್ಡ ವೆಂಕಟೇಶ, ನಡವಿ ಮಲ್ಲಿಕಾರ್ಜುನ, ಅಯೋಧಿ ವೆಂಕಟೇಶ, ಬಿ.ಸಿದ್ದಪ್ಪ, ಟಿ.ಗಂಗಣ್ಣ, ಬಿ.ಈರಪ್ಪ, ಕೆ.ಮನೋಹರ, ಬಿ.ಮಲ್ಲಿಕಾರ್ಜುನ, ಅಯೋಧಿ ರಮೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net