ಹೂವಿನಹಡಗಲಿ: ಪಟ್ಟಣದ ಕೋಟೆ ಭಾಗದಲ್ಲಿರುವ ಗ್ರಾಮ ದೇವತೆ ಊರಮ್ಮ ದೇವಿಗೆ ಮಂಗಳವಾರ ಉಡಿತುಂಬುವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಬೆಳಗ್ಗೆ ಶ್ರೀ ದೇವಿಗೆ ವಿವಿಧ ಆಭರಣಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಸ್ಥಾನದ ಕಮಿಟಿ ಸದಸ್ಯರು ಶ್ರೀ ದೇವಿಗೆ ಉಡಿತುಂಬಿ, ಪಟ್ಟಣದ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಉಡಿ ತುಂಬಿದರು.