ಕಂಪ್ಲಿ: ಪಟ್ಟಣದ ಕೊಟ್ಟಾಲ ರಸ್ತೆ ಹಾಗೂ ಸೋಮಪ್ಪ ದೇವಸ್ಥಾನ ಬಳಿಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಹನುಮಮಾಲಾ ಸೇವಾ ಸಮಿತಿಯಿಂದ ಬುಧವಾರ ಹನುಮ ಮಾಲಾಧಾರಿಗಳ ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆಯಿತು.
ಸಮಿತಿ ಅಧ್ಯಕ್ಷ ಶ್ರೀಗುರು ಮಾತನಾಡಿ, ಪಟ್ಟಣದಲ್ಲಿ ನೂರಕ್ಕೂ ಹೆಚ್ಚು ಹನುಮ ಮಾಲಾಧಾರಿಗಳಿದ್ದು, ಸೋಮಪ್ಪ ಹಾಗೂ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಕಳೆದ ಎಂಟು ವರ್ಷಗಳಿಂದ ಗಂಗಾವತಿಯ ತಾತಯ್ಯ ಅವರಿಂದ ಇರುಮುಡಿ ಕಟ್ಟುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇರುಮುಡಿ ಹೊತ್ತು ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಗುರುವಾರ ಹನುಮ ಜಯಂತ್ಯುತ್ಸವ ಆಚರಿಸಲಾಗುವುದು ಎಂದರು.