ರೈತರ ಹೋರಾಟ ಎಂದಿಗೂ ನಿಲ್ಲದು

ಹಗರಿಬೊಮ್ಮನಹಳ್ಳಿಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಜೆ.ಎಂ.ವೀರಸಂಗಯ್ಯ ರಚಿಸಿದ ‘ಫ್ರೀ ಪೇಯ್ಡ ಮೀಟರ್ ಬಂತು ರೈತರಿಗೆ ಆಪತ್ತು ತಂತು’ ಪುಸ್ತಕ ಬಿಡುಗಡೆ ಮಾಡಲಾಯಿತು. ಸಾಹಿತಿ ಮೇಟಿ ಕೊಟ್ರಪ್ಪ,  ಹುರಕಡ್ಲಿ ಶಿವಕುಮಾರ್, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ದೇವರಾಜ, ನಿರ್ದೇಶಕ ಜಿ.ಮಂಜುನಾಥ್ ಮತ್ತಿತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪುಸ್ತಕ
  • ಬಿಡುಗಡೆ
  • ಕಾರ್ಯಕ್ರಮ
ಹಗರಿಬೊಮ್ಮನಹಳ್ಳಿ: ರೈತರು ಕೃಷಿ ಭದ್ರತೆಗಾಗಿ ಅನೇಕ ಹೋರಾಟ ಮಾಡುತ್ತಿದ್ದು, ದೆಹಲಿ ಬಳಿ ಒಂದೂವರೆ ವರ್ಷ ಹೋರಾಟ ಮಾಡಿದ ರೈತರಿಗೆ ಭಯೋತ್ಪಾದಕರು, ಉಗ್ರರು ಎಂದು ಬಿರುದು ಕೊಡಲಾಯಿತು. ಆದರೆ ರೈತ ಹೋರಾಟಗಳು ಎಂದಿಗೂ ನಿಲ್ಲುವುದಿಲ್ಲ ಎಂದು ಹಿರಿಯ ಸಾಹಿತಿ ಮೇಟಿ ಕೊಟ್ರಪ್ಪ ಹೇಳಿದರು.
ಪಟ್ಟಣದ ಕೃಷಿಕ ಭವನದಲ್ಲಿ ಜೆ.ಎಂ.ವೀರಸಂಗಯ್ಯ ಅವರ ‘ಫ್ರೀ ಪೇಯ್ಡ ಮೀಟರ್ ಬಂತು ರೈತರಿಗೆ ಆಪತ್ತು ತಂತು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ದೇವರಾಜ ಮಾತನಾಡಿ, ಸರ್ಕಾರ ವಿದ್ಯುತ್‌ಗೆ ಸಂಬಂಧಿಸಿದಂತೆ ಮಾರಕವಾದ ಕಾಯ್ದೆ ಜಾರಿಗೆ ತಂದಿದ್ದು, ಅದನ್ನು ವಿರೋಧಿಸಿ ಸಾಕಷ್ಟು ಚಳವಳಿ ನಡೆದಿವೆ. ಅದರ ಭಾಗವಾಗಿ ಪುಸ್ತಕ ರಚನೆಯಾಗಿದೆ ಎಂದರು. ನಿವೃತ್ತ ಸರ್ವೇ ಅಧಿಕಾರಿ ಸಕ್ರಿಗೌಡ್ರು, ಪ್ರಮುಖರಾದ ಹೆಗ್ಡಾಳ್ ರಾಮಣ್ಣ, ನೀಲಕಂಠಪ್ಪ, ರಾಜಣ್ಣ, ಜಗನ್ನಾಥ, ಮೇಟಿ ಕೊಟ್ರಪ್ಪ, ಚಿಂತ್ರಪಳ್ಳಿ ಮಹಾದೇವಪ್ಪ, ಹರಟೆ ಕಾಳಪ್ಪ, ಇರ್ಫಾನ್, ಗಂಗಪ್ಪ, ಹಲಿಗೇರಿ ಮಹೇಶ, ನಿವೃತ್ತ ಶಿಕ್ಷಕ ಶಂಭುಲಿಂಗಪ್ಪ, ಕಡ್ಲೆಪ್ಪ, ಕೇಶವರಾಯನ ಬಂಡಿ ನಾಗರಾಜ, ಆನಂದ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net