ಬೇಡಿಕೆಗಳು ವೈಯಕ್ತಿಕ ಉದ್ದೇಶ ಹೊಂದಿಲ್ಲ

ತೋರಣಗಲ್ ನಾಡಕಚೇರಿ ಮುಂದೆ ಡಿವೈಎಫ್‌ಐ ಹಾಗೂ ಇತರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ತೋರಣಗಲ್ ನಾಡಕಚೇರಿ ಮುಂದೆ ಡಿವೈಎಫ್‌ಐ ಹಾಗೂ ಇತರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
Published on
ಸಂಡೂರು: ದೆಹಲಿಯ ಜಂತರ್ ಮಂತರ್ ನಡೆಯುತ್ತಿರುವ ಹೋರಾಟದ ವೇಳೆ ವಿದ್ಯಾರ್ಥಿಗಳ ಮೇಲಿನ ಲಾಠಿ ಪ್ರಹಾರ ಖಂಡನೀಯ. ಪರೀಕ್ಷೆ ನಿರ್ವಹಣೆಯಲ್ಲಿ ವಿಫಲವಾಗಿರುವ ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಚ್.ಸ್ವಾಮಿ ಆಗ್ರಹಿಸಿದರು.
ತೋರಣಗಲ್ ನಾಢಕಚೇರಿ ಮುಂದೆ ಡಿವೈಎಫ್‌ಐ, ದಲಿತ ಯುವಕರ ಸಂಘ, ಡಿಎಸ್‌ಎಸ್, ಎಸ್‌ಎಫ್‌ಐದಿಂದ ಪ್ರತಿಭಟನೆ ನಡೆಸಿ ವಿಎ ಪ್ರಭುಲಿಂಗಸ್ವಾಮಿಗೆ ಮನವಿ ಸಲ್ಲಿಸಿ ಮಾತನಾಡಿದರು. ಹೋರಾಟಗಾರರ ಬೇಡಿಕೆಗಳು ಪಕ್ಷಪಾತ ಅಥವಾ ವೈಯಕ್ತಿಕ ಉದ್ದೇಶಗಳಿಂದ ಕೂಡಿಲ್ಲ. ಅವು ಭಾರತದ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ, ಸಮಾನ ಅವಕಾಶ, ಸಂಸ್ಥೆಗಳ ಹೊಣೆಗಾರಿಕೆ ಹಾಗೂ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿವೆ ಎಂದು ಹೇಳಿದರು.
ಪರೀಕ್ಷೆಗಳ ವಿಶ್ವಾಸಾರ್ಹತೆ ಕುಸಿದಾಗ ಅದರ ತೀವ್ರ ಪರಿಣಾಮ ಬಡವರು, ಗ್ರಾಮೀಣ ವಿದ್ಯಾರ್ಥಿಗಳ ಮೇಲೆ ಆಗುತ್ತದೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಹಾಗೂ ಮೌನ ನಾಚಿಕೆಗೇಡು. ಪರೀಕ್ಷಾ ಬಿಕ್ಕಟ್ಟು ವಿದ್ಯಾರ್ಥಿಗಳಲ್ಲಿ ಆತಂಕ, ಆರ್ಥಿಕ, ಶೈಕ್ಷಣಿಕ ನಷ್ಟ, ಮಾನಸಿಕ ಆಘಾತಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ನಾಗಭೂಷಣ, ಗ್ರಾಮ ಘಟಕದ ಎಚ್.ಶಂಕರ್ ಕರಿಯಪ್ಪ, ಮಂಜುನಾಥ್, ಮಹೇಶ್, ಹುಲಿಗೇಶ್, ಹರೀಶ್, ಮಲ್ಲಿಕಾರ್ಜುನ, ಶ್ರಾವಣಿ, ಎನ್.ಸಂಗೀತಾ, ಸಿಂಚನ, ಯು.ಸಂಗೀತಾ, ಸಿಂಧು, ಸ್ನೇಹ, ಸ್ವಪ್ನಾ, ಅಸ್ಮಿತ, ವಿನೋದ, ಪುರುಷೋತ್ತಮ್, ರವಿಕಿರಣ್, ದರ್ಶನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net