ಪ್ರಜೆಗಳೇ ಅಧಿಕಾರದ ಮೂಲ

ಹೂವಿನಹಡಗಲಿಯ ಜಿಬಿಆರ್ ಪದವಿ ಕಾಲೇಜಿನಲ್ಲಿ ಪ್ರಜಾಪ್ರತಿನಿಧಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ರೇವಣಸಿದ್ದಪ್ಪ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಡಾ.ಕೆ.ರುದ್ರಪ್ಪ, ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರ ಪಾಟೀಲ್, ಪ್ರಾಚಾರ್ಯ ಎಸ್.ಎಸ್.ಪಾಟೀಲ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೈ.ಚಂದ್ರಬಾಬು ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಪ್ರಾಚಾರ್ಯ ರೇವಣಸಿದ್ದಪ್ಪ ಹೇಳಿಕೆ
  • ಪ್ರಜಾಪ್ರತಿನಿಧಿ ದತ್ತಿ ಉಪನ್ಯಾಸ

ಹೂವಿನಹಡಗಲಿ: ರಾಷ್ಟ್ರದ ಪ್ರಜೆಗಳಾದ ನಾವು ನಮ್ಮ ಕರ್ತವ್ಯಗಳನ್ನು ತಿಳಿಯಬೇಕು ಎಂದು ನಿವೃತ್ತ ಪ್ರಾಚಾರ್ಯ ರೇವಣಸಿದ್ದಪ್ಪ ಹೇಳಿದರು.

ಜಿಬಿಆರ್ ಪದವಿ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕದಿಂದ ಗುರುವಾರ ಪ್ರಜಾಪ್ರತಿನಿಧಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಅಧಿಕಾರದ ಮೂಲವಾಗಿದ್ದು, ಚುನಾಯಿತ ಪ್ರತಿನಿಧಿಗಳು ಜನರ ಅಶೋತ್ತರಗಳಿಗೆ ಸ್ಪಂದಿಸಿ ಜನಪರ ಆಡಳಿತ ನೀಡಬೇಕು. ಪ್ರಜೆಗಳು ತಮ್ಮ ಕರ್ತವ್ಯಗಳನ್ನು ಅರಿತು ಚುನಾವಣೆಯಲ್ಲಿ ಸೂಕ್ತವ್ಯಕ್ತಿಯನ್ನು ಆಯ್ಕೆ ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಮರೆಯಬಾರದು. ಉತ್ತಮ ಅಭ್ಯಾಸದಿಂದ ಉನ್ನತ ಹುದ್ದೆ ಪಡೆಯಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಡಾ.ಕೆ.ರುದ್ರಪ್ಪ, ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರ ಪಾಟೀಲ್, ಪ್ರಾಚಾರ್ಯ ಎಸ್.ಎಸ್.ಪಾಟೀಲ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೈ.ಚಂದ್ರಬಾಬು, ಕಸಾಪ ಸದಸ್ಯ ಯುವರಾಜ ಗೌಡ, ಅಧ್ಯಾಪಕರಾದ ಕೆ.ಮಧುಸೂದನ, ಬಸವರಾಜ ಪೂಜಾರ, ಬಡೇಸಾಬ್ ನಾಯಕ, ಅನ್ನದಾನಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net