ಕೇಂದ್ರ ಸರ್ಕಾರ ಮೌನ ಖಂಡನೀಯ

ಬಳ್ಳಾರಿಯ ಗಡಗಿ ಚನ್ನಪ್ಪ ವೃತ್ತದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಮೋದಿ ಅವರ ಪ್ರತಿಕೃತಿ ದಹನಗೊಳಿಸಲಾಯಿತು. ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್, ಮುಖಂಡರಾದ ಮಂಜುನಾಥ, ಕುಮಾರಸ್ವಾಮಿ, ಬಸವರಾಜ್, ರುದ್ರಗೌಡ, ಶಶಿಕುಮಾರ್, ಅಜರುದ್ದಿನ್, ಖಾದರ್, ಉಮೇಶ್‌ಗೌಡ, ಗೋಪಾಲ್ ಬಸವರಾಜ್ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನೆ
ಬಳ್ಳಾರಿ : ಎಪಿನ್ಸ್ ಫೈಲ್ಸ್ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಉಲ್ಲೇಖದ ಬಗ್ಗೆ ಕೇಂದ್ರ ಸರ್ಕಾರ ಮೌನ ವಹಿಸಿರುವುದು ಖಂಡಿಸಿ, ಇಲ್ಲಿನ ಗಡಗಿ ಚನ್ನಪ್ಪ ವೃತ್ತದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಮಾತನಾಡಿ, ದೇಶದ ಪ್ರಧಾನ ಮಂತ್ರಿಯ ಹೆಸರು ಅಂತರಾಷ್ಟ್ರೀಯ ಮಟ್ಟದ ಗಂಭೀರ ಹಗರಣದಲ್ಲಿ ಉಲ್ಲೇಖವಾಗಿರುವಾಗ ಕೇಂದ್ರ ಸರ್ಕಾರ ಮೌನ ವಹಿಸಿರುವುದು ಅಸಹ್ಯಕರ. ಇದು ಕೇವಲ ರಾಜಕೀಯ ವಿಚಾರವಲ್ಲ. ದೇಶದ ಗೌರವ ಹಾಗೂ ಪ್ರಜಾಪ್ರಭುತ್ವದ ಪಾರದರ್ಶಕತೆಗೆ ಸಂಬಂಧಿಸಿದ ವಿಷಯವಾಗಿದೆ. ಮೋದಿ ಸರ್ಕಾರ ತಕ್ಷಣ ಜನತೆಗೆ ಸತ್ಯವನ್ನು ತಿಳಿಸಿ ನೈತಿಕ ಹೊಣೆಗಾರಿಕೆ ವಹಿಸಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಈವರೆಗೆ ಯಾವುದೇ ಸ್ಪಷ್ಟನೆ ನೀಡದೇ ಮೌನ ವಹಿಸಿರುವುದು ಖಂಡನೀಯ ಎಂದರು. ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಮೋದಿ ಅವರ ಪ್ರತಿಕೃತಿ ದಹನಗೊಳಿಸಲಾಯಿತು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net