ಕಂಪ್ಲಿಯಲ್ಲಿ ಚುನಾವಣೆ ಬಹಿಷ್ಕರಿಸಿದ ಶಿಕ್ಷಕರು

ಕಂಪ್ಲಿ ಎಸ್.ಎನ್.ಪೇಟೆ ಸಹಿಪ್ರಾಶಾಲೆ ಆವರಣದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯ ಶಿಕ್ಷಕರು ಚುನಾವಣಾ ಬಹಿಷ್ಕರಿಸಿದರು. ಶಿಕ್ಷಕರಾದ ಎಂ.ಎ.ನಾಗನಗೌಡ, ಶೆಟ್ರು ಚಂದ್ರಶೇಖರ, ರೇವಣಸಿದ್ದೇಶ, ಎಚ್.ಪಿ.ಸೋಮಶೇಖರ್, ಸುನೀತಾ ಪೂಜಾರ, ಶೆಟ್ರು ಚನ್ನಬಸಮ್ಮ ಇತರರಿದ್ದರು.
ಕಂಪ್ಲಿ ಎಸ್.ಎನ್.ಪೇಟೆ ಸಹಿಪ್ರಾಶಾಲೆ ಆವರಣದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯ ಶಿಕ್ಷಕರು ಚುನಾವಣಾ ಬಹಿಷ್ಕರಿಸಿದರು. ಶಿಕ್ಷಕರಾದ ಎಂ.ಎ.ನಾಗನಗೌಡ, ಶೆಟ್ರು ಚಂದ್ರಶೇಖರ, ರೇವಣಸಿದ್ದೇಶ, ಎಚ್.ಪಿ.ಸೋಮಶೇಖರ್, ಸುನೀತಾ ಪೂಜಾರ, ಶೆಟ್ರು ಚನ್ನಬಸಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮತದಾರ ಪಟ್ಟಿಯಲ್ಲಿ ಕೈಬಿಟ್ಟ ಹೆಸರುಗಳನ್ನು ಸೇರಿಸಲು ಆಗ್ರಹ
  • ಕಂಪ್ಲಿ ದೋಷಗಳನ್ನು ಸರಿಪಡಿಸಿ ಚುನಾವಣೆ ನಡೆಸಲು ಒತ್ತಾಯ
ಕಂಪ್ಲಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ಚುನಾವಣೆ ಅಕ್ರಮವಾಗಿದ್ದು, ಚುನಾವಣೆ ತಡೆದು, ದೋಷಗಳನ್ನು ಸರಿಪಡಿಸಿ ಚುನಾವಣೆ ನಡೆಸಬೇಕು ಎಂದು ಸಂಘದ ಮಾಜಿ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ.ನಾಗನಗೌಡ ಒತ್ತಾಯಿಸಿದರು.
ಪಟ್ಟಣದ ಎಸ್.ಎನ್.ಪೇಟೆ ಸಹಿಪ್ರಾಶಾಲೆ ಆವರಣದಲ್ಲಿ ಸಂಘದ ಸದಸ್ಯ ಶಿಕ್ಷಕರು ಚುನಾವಣಾ ಬಹಿಷ್ಕರಿಸಿದ ಸಂದರ್ಭದಲ್ಲಿ ಮಾತನಾಡಿ, ಏ.19ರಂದು ಚುನಾವಣೆ ನಡೆಯಲಿದ್ದು, ಇಂದಿನಿಂದ ನಾಮಪತ್ರ ಸ್ವೀಕರಿಸಲಾಗುವುದು. ಆದರೆ, ಈವರೆಗೆ ಚುನಾವಣಾಧಿಕಾರಿ ನೇಮಕವಾಗಿಲ್ಲ. ಕಚೇರಿ ನಿಗದಿಗೊಳಿಸಿಲ್ಲ. ಮತದಾರರ ಪಟ್ಟಿ ಪ್ರಕಟಿಸಿಲ್ಲ. ಮುಖ್ಯವಾಗಿ ನನ್ನ ಹೆಸರು ಹಾಗೂ ಇನ್ನೊಬ್ಬ ಶಿಕ್ಷಕನ ಹೆಸರು ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದಾರೆ.
ಕಳೆದ 5 ವರ್ಷಗಳಿಂದ ವೇತನದಲ್ಲಿ ಸಂಘದ ಮಾಸಿಕ ವಂತಿಗೆ ಕಡಿತಗೊಳಿಸಿದ್ದಾರೆ. ಇದಕ್ಕೆಲ್ಲ ತಾಲೂಕು ಘಟಕದ ಅಧ್ಯಕ್ಷರೇ ನೇರ ಹೊಣೆಯಾಗಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಿಸಿ, ಕೈಬಿಟ್ಟ ಸದಸ್ಯರ ಹೆಸರು ಸೇರಿಸಿ ಪಟ್ಟಿಯನ್ನು ಸಕ್ರಮಗೊಳಿಸಿದ ನಂತರವೇ ಚುನಾವಣೆ ನಡೆಸಬೇಕು. ತಪ್ಪಿದಲ್ಲಿ ತಾಲೂಕು ಸಂಘದ ಸದಸ್ಯರಿಂದ ಚುನಾವಣೆ ಬಹಿಷ್ಕರಿಸಲಾಗುವುದು. ಈ ಕುರಿತು ಶಾಸಕ ಜೆ.ಎನ್.ಗಣೇಶ್ ಅವರ ಗಮನಕ್ಕೆ ತರಲಾಗಿದೆ ಎಂದರು.
ಶಿಕ್ಷಕರಾದ ಎಂ.ಎ.ನಾಗನಗೌಡ, ಶೆಟ್ರು ಚಂದ್ರಶೇಖರ, ರೇವಣಸಿದ್ದೇಶ, ಎಚ್.ಪಿ.ಸೋಮಶೇಖರ್, ಪ್ರಭಾಕರ, ವಸಂತಕುಮಾರ್, ಜೋಗಿನಾಯ್ಕ ರುದ್ರಪ್ಪ, ಸುನೀತಾ ಪೂಜಾರ, ಶೆಟ್ರು ಚನ್ನಬಸಮ್ಮ, ಗೌರಮ್ಮ, ಲತಾ ಇತರರಿದ್ದರು.
ವಿರೋಧಿ ಚಟುವಟಿಕೆ: ಸಂಘದ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರಿಂದ ಇಬ್ಬರನ್ನು ಕೇಂದ್ರ ಸಮಿತಿ ಮತದಾರ ಪಟ್ಟಿಯಿಂದ ಕೈಬಿಟ್ಟಿದೆ. ಚುನಾವಣಾಧಿಕಾರಿಯಾಗಿ ರಮೇಶ್ ಸುಗ್ಗೇನಹಳ್ಳಿ ನೇಮಕವಾಗಿದ್ದು, ನಟರಾಜ ಸಂಘದ ಪಕ್ಕದ ಸಹಿಪ್ರಾ ಶಾಲೆ ಕೊಠಡಿಯಲ್ಲಿ ಚುನಾವಣಾ ಕಚೇರಿ ಆಯೋಜಿಸಲಾಗಿದೆ. ಮತದಾರ ಪಟ್ಟಿಯಲ್ಲಿ 111 ಸದಸ್ಯರಿದ್ದಾರೆ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಏ.11, 12ಕ್ಕೆ ನಾಮಪತ್ರ ಸಲ್ಲಿಕೆ, ಏ.13ರಂದು ನಾಮಪತ್ರ ಪರಿಶೀಲನೆ, ಸಂಜೆ ಕ್ರಮಬದ್ಧ ನಾಮಪತ್ರಗಳ ಪ್ರಕಟಣೆೆ, ಏ.14ರಂದು ನಾಮಪತ್ರ ವಾಪಸ್ಸು ಪಡೆಯಲು ಅವಕಾಶ ಹಾಗೂ ಅಂತಿಮ ಕಣದಲ್ಲಿ ಉಳಿದವರ ಹೆಸರು ಪ್ರಕಟಿಸಲಾಗುವುದು. ಏ.19ರಂದು ಚುನಾವಣೆ ನಡೆಯಲಿದೆ ಎಂದು ತಾಲೂಕು ಅಧ್ಯಕ್ಷ ಹನುಮಂತಪ್ಪ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net