ಕಂಪ್ಲಿ: ಮಕ್ಕಳಲ್ಲಿ ಸಂಸ್ಕಾರದ ಕೊರತೆಯಾಗುತ್ತಿದ್ದು, ಪಾಲಕರು ನಿಗಾ ವಹಿಸುವ ಅಗತ್ಯತೆಯಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ಹೇಳಿದರು.
ಲಿಂ.ಗೊಗ್ಗ ಚನ್ನಬಸಯ್ಯ ಹಾಗೂ ಆದೋನಿಯ ಲಿಂ.ಮಿಠಾಯಿ ಚನ್ನಬಸಯ್ಯ ಅವರ ಪುಣ್ಯಸ್ಮರಣೆ ನಿಮಿತ್ತ ಪಟ್ಟಣದ ಗುರುಮಠದಲ್ಲಿ ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರಮದಿಂದ ಆಯೋಜಿಸಿದ್ದ 259ನೇ ಶಿವಾನುಭವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸುವ ಅಗತ್ಯತೆ ಇದೆ ಎಂದರು.
ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಘನಮಠದಯ್ಯ ಹಿರೇಮಠ ‘ವಚನಗಳಿಂದ ಜೀವನ ದರ್ಶನ’ ಕುರಿತು ಉಪನ್ಯಾಸ ನೀಡಿ ಮೊಬೈಲ್, ದೂರದರ್ಶನ, ಸಾಮಾಜಿಕ ಮಾಧ್ಯಮಗಳಿಂದ ಬಾಂಧವ್ಯ ಹಳಿಸುತ್ತಿವೆ. ಅರ್ಥಪೂರ್ಣ ಜೀವನ ನಡೆಸಲು ಶಿವಶರಣರ ವಿಚಾರಧಾರೆಗಳನ್ನು ಅರಿಯಬೇಕಿದೆ ಎಂದರು.
ವಚನ ಸ್ಪರ್ಧೆಯಲ್ಲಿ ಗೊಗ್ಗ ಶಿವಾನಿ, ಎಚ್.ಎಂ.ತನುಷ್ಕಾ, ಗೊಗ್ಗ ಉಜ್ಜಯಿನಿ, ಗಗನ ಪ್ರಥಮ, ಪಿ.ತೇಜಮೂರ್ತಿ, ಡಿ.ಸುರಭಿ, ಡಿ.ಜ್ಞಾನಿತ, ಅಶ್ವಿನಿ ದ್ವಿತೀಯ ಬಹುಮಾನ, ಧೃವ ಪಡವಾಡಶೆಟ್ಟಿ, ಎಸ್.ಸಿ.ಶ್ರೇಯಾ, ಎಸ್.ಲಾವಣ್ಯ, ಹೇಮಾವತಿ ತೃತೀಯ ಬಹುಮಾನ ಪಡೆದರು.