ತೆರಿಗೆ ಸಂಗ್ರಹವಾದರೆ ಅಭಿವೃದ್ಧಿಗೆ ಅನುಕೂಲ

ಕುರುಗೋಡು ತಾಲೂಕಿನ ಕಲ್ಲುಕಂಬದಲ್ಲಿ ತೆರಿಗೆ ವಸೂಲಿ ಆಂದೋಲನ ಹಿನ್ನೆಲೆಯಲ್ಲಿ ಗ್ರಾಪಂ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ  ತೆರಿಗೆ ಸಂಗ್ರಹಿಸಿದರು.
ಕುರುಗೋಡು ತಾಲೂಕಿನ ಕಲ್ಲುಕಂಬದಲ್ಲಿ ತೆರಿಗೆ ವಸೂಲಿ ಆಂದೋಲನ ಹಿನ್ನೆಲೆಯಲ್ಲಿ ಗ್ರಾಪಂ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ತೆರಿಗೆ ಸಂಗ್ರಹಿಸಿದರು.
Published on
ಕುರುಗೋಡು: ಕಲ್ಲುಕಂಬ, ಲಕ್ಷ್ಮೀಪುರ, ಶ್ರೀನಿವಾಸ್ ನಗರ ಮತ್ತು ಮುಷ್ಟುಗಟ್ಟೆ ಗ್ರಾಮದಲ್ಲಿ 20 ಲಕ್ಷ ರೂ. ತೆರಿಗೆ ಬಾಕಿ ಇದ್ದು, 10 ಲಕ್ಷ ರೂ. ಸಂಗ್ರಹ ಗುರಿ ಹೊಂದಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಮಕಾಶಿ ಬಸವರಾಜ್ ಹೇಳಿದರು.
ಕಲ್ಲುಕಂಬದಲ್ಲಿ ತೆರಿಗೆ ವಸೂಲಿ ಅಭಿಯಾನದಲ್ಲಿ ಶುಕ್ರವಾರ ಮಾತನಾಡಿ, ಪ್ರತಿಯೊಬ್ಬರೂ ತೆರಿಗೆ ಪಾವತಿಗೆ ಮುಂದಾಗಬೇಕು. ಸಕಾಲಕ್ಕೆ ತೆರಿಗೆ ಸಂಗ್ರಹವಾದರೆ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿಗೆ ನೆರವಾಗಲಿದೆ. ಹೀಗಾಗಿ ಸಾರ್ವಜನಿಕರಿಂದ ನೀರು, ಕಟ್ಟಡ ಸೇರಿ ಇತರ ಬಾಕಿ ತೆರಿಗೆ ವಸೂಲಿ ಮಾಡುತ್ತಿದ್ದು, ಐದು ಲಕ್ಷ ರೂ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಪರಮೇಶ್ವರ್, ಕರ ವಸೂಲಿಗಾರ ಕೆ.ಮಲ್ಲೇಶಪ್ಪ, ಸಿಬ್ಬಂದಿ ದುರ್ಗಪ್ಪ, ಮಂಜುನಾಥ, ಬಿ. ನಾಗರಾಜ್, ಬಸವರಾಜ್, ಗೀತಾ, ಅಂಬುಜಾ, ಮೀನಾಕ್ಷಿ, ಲಲಿತಾ, ಹುಲಗಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net