ಬರಗಾಲ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿ

ಸಿರಗುಪ್ಪ ತಾಪಂ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕುಡಿವ ನೀರು ಹಾಗೂ ಬರಗಾಲ ಮೇಲ್ವಿಚಾರಣೆ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಶಾಸಕ ಬಿ.ಎಂ. ನಾಗರಾಜ ಮಾತನಾಡಿದರು. ತಹಸೀಲ್ದಾರ್ ಗೌಸಿಯಬೇಗಂ, ತಾಪಂ ಇಒ ಪವನಕುಮಾರ್, ಪೌರಾಯುಕ್ತ ಗಂಗಾಧರ, ಸಿಪಿಐಗಳಾದ ಚಂದನ್ ಗೋಪಾಲ, ಹನುಮಂತಪ್ಪ ಇದ್ದರು.
ಸಿರಗುಪ್ಪ ತಾಪಂ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕುಡಿವ ನೀರು ಹಾಗೂ ಬರಗಾಲ ಮೇಲ್ವಿಚಾರಣೆ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಶಾಸಕ ಬಿ.ಎಂ. ನಾಗರಾಜ ಮಾತನಾಡಿದರು. ತಹಸೀಲ್ದಾರ್ ಗೌಸಿಯಬೇಗಂ, ತಾಪಂ ಇಒ ಪವನಕುಮಾರ್, ಪೌರಾಯುಕ್ತ ಗಂಗಾಧರ, ಸಿಪಿಐಗಳಾದ ಚಂದನ್ ಗೋಪಾಲ, ಹನುಮಂತಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ.ಎಂ. ನಾಗರಾಜ ಸೂಚನೆ
  • ಟಾಸ್ಕ್‌ಫೋರ್ಸ್ ಸಮಿತಿ ಸಭೆ

ಸಿರಗುಪ್ಪ:

ತಾಲೂಕಿನಲ್ಲಿ ಕುಡಿವ ನೀರಿನ ಅಭಾವ ತಲೆದೂರದಂತೆ ಮತ್ತು ಬರಗಾಲ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ ಎಂದು ಶಾಸಕ ಬಿ.ಎಂ. ನಾಗರಾಜ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಕುಡಿವ ನೀರು ಹಾಗೂ ಬರಗಾಲ ಮೇಲ್ವಿಚಾರಣೆಯ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀರಿನ ಸಮಸ್ಯೆ ಇರುವ ನಗರ ಮತ್ತು ಗ್ರಾಮಗಳನ್ನು ಗುರುತಿಸಿ ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಿ. ಅಗತ್ಯವಿದ್ದಲ್ಲಿ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಪೂರೈಸಿ. ಶುದ್ಧ ಕುಡಿವ ನೀರಿನ ಘಟಕಗಳ ದುರಸ್ತಿ ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ.
ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಬರ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗಲು ಬೆಳೆ ವಿಮೆ ಮತ್ತು ತುರ್ತು ನೀರಾವರಿ ಸಲಹೆಗಳನ್ನು ನೀಡಬೇಕು. ನೀರು ಬಳಕೆ ಬಗ್ಗೆ ಜಾಗೃತಿ ಮೂಡಿಸಿ. ಅಲ್ಪ ನೀರಿನಲ್ಲಿ ಬೆಳೆಯುವ ಬೆಳೆಗಳನ್ನು ಪರಿಚಯಿಸಿ, ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ಗಳಿಸುವ ಮಾರ್ಗಗಳನ್ನು ತಿಳಿಸುವಂತೆ ಸೂಚಿಸಿದರು.
ದೇಶನೂರು ಗ್ರಾಪಂ ವ್ಯಾಪ್ತಿಯಲ್ಲಿ ನೋಂದಾಯಿತ ಭಾರತ್ ಜೋಡೋ ಯುವ ಸಂಘದ ಮಹಿಳಾ ಸದಸ್ಯರಿಗೆ ಶಾಸಕರು ಗುರುತಿನ ಚೀಟಿಗಳನ್ನು ವಿತರಿಸಿ, ಯುವಜನರು ಹಾಗೂ ಮಹಿಳೆಯರು ಸಂಘಟಿತರಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಬಗ್ಗೂರು ಗ್ರಾಪಂ ವ್ಯಾಪ್ತಿಯ ರಂಗಸ್ವಾಮಿಗೆ ವಿಬಿ ಜಿ ರಾಮ್ ಜಿ ಗುರುತಿನ ಚೀಟಿ ವಿತರಿಸಿ, ಗ್ರಾಮೀಣ ಕೂಲಿಕಾರರಿಗೆ ಉದ್ಯೋಗದ ಅವಕಾಶ ಕಲ್ಪಿಸುವಂತೆ ಪಿಡಿಒಗಳಿಗೆ ಸೂಚಿಸಿದರು.
ಮೃತ ಮಹಿಳೆಯರ ಖಾತೆಗೆ ಜಮೆ ಮಾಡಲಾದ ಗೃಹಲಕ್ಷ್ಮಿ ಯೋಜನೆ 29 ಲಕ್ಷ ರೂ. ಹಣದಲ್ಲಿ 25.95 ಲಕ್ಷ ಸರ್ಕಾರಕ್ಕೆ ಹಿಂತಿರುಗಿಸಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಗೌಸಿಯಬೇಗಂ, ತಾಪಂ ಇಒ ಪವನಕುಮಾರ್, ಪೌರಾಯುಕ್ತ ಗಂಗಾಧರ, ಸಿಪಿಐಗಳಾದ ಚಂದನ್ ಗೋಪಾಲ, ಹನುಮಂತಪ್ಪ, ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net