ಮಣ್ಣಿನ ಫಲವತ್ತತೆ ಕಾಪಾಡಲು ಮುಂದಾಗಿ

ಕನ್ನಿಹಳ್ಳಿ ಗ್ರಾಮದಲ್ಲಿ ಖೇತ್ ಬಚಾವೋ ಆಂದೋಲನ ಅಂಗವಾಗಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕ ಎ.ವಾಮದೇವ ಕೊಳ್ಳಿ ಮಾತನಾಡಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂಜೀವಗೌಡ ಪಾಟೀಲ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿಜಯ ನಿಚ್ಚಪುರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಇಲಾಖೆ ಉಪ ನಿರ್ದೇಶಕ ಎ.ವಾಮದೇವ್ ಕೊಳ್ಳಿ ಸಲಹೆ
  • ಹಗರಿಬೊಮ್ಮನಹಳ್ಳಿ ಕೃಷಿ ತರಬೇತಿ ಕಾರ್ಯಕ್ರಮ
ಹಗರಿಬೊಮ್ಮನಹಳ್ಳಿ: ಮಣ್ಣಿನ ರಕ್ಷಣೆ ರೈತರ ಕೈಯಲ್ಲಿದೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಎ.ವಾಮದೇವ್ ಕೊಳ್ಳಿ ತಿಳಿಸಿದರು.
ಕನ್ನಿಹಳ್ಳಿ ಗ್ರಾಮದಲ್ಲಿ ಖೇತ್ ಬಚಾವೋ ಆಂದೋಲನ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಣ್ಣಿನ ಫಲವತ್ತೆತೆ ಕಾಪಾಡಲು ರೈತರು ಮುಂದಾಗಬೇಕಿದೆ ಎಂದರು.
ಕೃಷಿ ವಿಜ್ಞಾನಿಗಳಾದ ಡಾ.ಸಿ.ಎಂ.ಕಾಲ್ವಿಬಾವಿ ಸಾವಯವ ಕೃಷಿ ಹಾಗೂ ಡಾ.ಬದರಿಪ್ರಸಾದ್ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಕೀಟ ಮತ್ತು ರೋಗ ಬಾಧೆ ಹತೋಟಿ ಕ್ರಮದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಮಂಜುನಾಥ ಭಾನುವಾಳ್ಳಿ ಅವರು ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತು ತಿಳಿಸಿಕೊಟ್ಟರು.
ಕೃಷಿ ಇಲಾಖೆ ಅಧಿಕಾರಿ ಸಂಜೀವಗೌಡ ಪಾಟೀಲ್, ತೋಟಗಾರಿಕೆ ಇಲಾಖೆ ಅಧಿಕಾರಿ ವಿಜಯ ನಿಚ್ಚಪುರ, ಕೃಷಿ ಇಲಾಖೆಯ ಎಂ.ಅರ್ಚನಾ, ನಾಗಾರ್ಜುನ, ಶಿವಮೂರ್ತಿ, ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕರಾದ ವಿ.ಕೆ.ಭೋಜ್ಯಾ, ಪ್ರವೀಣ್ ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net