ವೈದ್ಯರು-ಸಿಬ್ಬಂದಿ ನಿರಂತರ ಸೇವೆಗೆ ಕ್ರಮ ವಹಿಸಿ

ಸಂಡೂರು ತಾಲೂಕು ತೋರಣಗಲ್ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಭರತ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಂಡೂರು ತಾಲೂಕು ತೋರಣಗಲ್ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಭರತ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
Published on
ಸಂಡೂರು: ತೋರಣಗಲ್ ಆರೋಗ್ಯ ಕೇಂದ್ರಕ್ಕೆ ಮೂಳೆ ತಜ್ಞರ ನೇಮಕ ಮಾಡಬೇಕು. ಆಸ್ಪತ್ರೆಯ ಶವಾಗಾರ ದುರಸ್ತಿ ಮಾಡಿಸಿ ಶವ ಪರೀಕ್ಷೆ ಮಾಡಬೇಕು ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಚ್.ಸ್ವಾಮಿ ಆಗ್ರಹಿಸಿದರು.
ತೋರಣಗಲ್ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಭರತ್ ಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗುರುವಾರ ಮಾತನಾಡಿದರು. ಕುಡಿಯುವ ನೀರಿನ ಘಟಕಗಳ ದುರಸ್ತಿ, ವಯಸ್ಸಿನ ದೃಢೀಕರಣ ಪತ್ರ ವಿತರಣೆ, ಆವರಣದ ಸುತ್ತಮುತ್ತ ಗ್ರಾಪಂ ಹಾಗೂ ಜೆಎಸ್‌ಡಬ್ಲುೃ ಸಿಎಸ್‌ಆರ್ ನೆರವಿನೊಂದಿಗೆ ದೀಪದ ಕಂಬಗಳನ್ನು ಅಳವಡಿಸುವುದು, ಆಸ್ಪತ್ರೆ ಒಳಗೆ ಮತ್ತು ಹೊರಗೆ ಸ್ವಚ್ಛತೆ ಕಾಪಾಡುವುದು, ದಿನದ 24 ಗಂಟೆ ವೈದ್ಯರು ಮತ್ತು ಸಿಬ್ಬಂದಿ ಸೇವೆಗೆ ಕ್ರಮವಹಿಸಬೇಕು. ಕುರೇಕುಪ್ಪ ಪುರಸಭೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಆಗುವವರಿಗೆ ನಮ್ಮ ಕ್ಲಿನಿಕ್‌ನಲ್ಲಿ ಎಂಬಿಬಿಎಸ್ ವೈದ್ಯರ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಟಿಎಚ್‌ಒ ಡಾ.ಭರತ್ ಕುಮಾರ್ ಮಾತನಾಡಿ, 15 ದಿನ ಕಾಲಾವಕಾಶ ನೀಡಿದರೆ ಅಷ್ಟರೊಳಗೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು. 250 ಬೆಡ್ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಅಥವಾ ವಿಶೇಷ ಟ್ರಾಮಾ ಕೇರ್ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸಲು ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಆಡಳಿತ ವೈದಾಧಿಕಾರಿ ಗೋಪಾಲ್ ರಾವ್, ಡಾ.ಸಾದಿಯಾ, ಡಾ.ಮಣಿಕುಮಾರ್, ಡಾ.ಭಾಗ್ಯಲಕ್ಷ್ಮೀ, ಡಿವೈಎಫ್‌ಐ ತೋರಣಗಲ್ ಘಟಕದ ಕಾರ್ಯದರ್ಶಿ ಲೋಕೇಶ್, ಸಹ ಕಾರ್ಯದರ್ಶಿ ಅನಿಲ್, ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಪಂಪನಗೌಡ, ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ, ಕಟ್ಟಡ ಕಾರ್ಮಿಕರ ಸಂಘದ ವಿ.ದೇವಣ್ಣ, ಹೊನ್ನೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net