ಕಂಪ್ಲಿಯಲ್ಲಿ ವಿಶ್ವ ಮಲೇರಿಯಾ ದಿನ ಆಚರಿಸಲಾಯಿತು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ, ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸವರಾಜ, ಪಿಎಚ್‌ಸಿಒ ಎನ್.ಉಮಾದೇವಿ, ಪ್ರಮುಖರಾದ ಸುನಿತಾ, ಮಹಾಲಕ್ಷ್ಮೀ ಇತರರಿದ್ದರು.
ಕಂಪ್ಲಿ: ಸ್ವಚ್ಛತೆ ಕಾಪಾಡುವ ಮೂಲಕ ಮಲೇರಿಯಾ ರೋಗದಿಂದ ವಿಮುಖರಾಗಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ ಹೇಳಿದರು.
ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಮಲೇರಿಯಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಲೇರಿಯಾಕ್ಕೆ ಕಾರಣವಾಗುವ ಅನಾಫಿಲಿಸ್ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಲು ಸ್ವಚ್ಛತೆ ಕಾಪಾಡಬೇಕು. ಸೊಳ್ಳೆ ಪರದೆ ಬಳಕೆ, ಕೀಟನಾಶಕ ಸಿಂಪಡಣೆ, ನೀರು ನಿಲ್ಲದಂತೆ ಕ್ರಮವಹಿಸಬೇಕು. ಮುನ್ನೆಚ್ಚರಿಕೆಯಿಂದ ಮಲೇರಿಯಾ ನಿವಾರಿಸಬಹುದು ಎಂದರು.