ಸಂಡೂರಿನ ತಾಪಂ ಆವರಣದಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಪ್ರಚಾರಕ್ಕೆ ಶಾಸಕಿ ಅನ್ನಪೂರ್ಣ ತುಕಾರಾಮ್ ಚಾಲನೆ ನೀಡಿದರು. ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ, ಬಿಇಒ ಡಾ.ಐ.ಆರ್.ಅಕ್ಕಿ, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ, ಸಿಡಿಪಿಒ ಪಿ.ನಾಗರಾಜ್, ತಾಪಂ ಎಡಿ ಮಹೇಶ ಕುಮಾರ, ಯೋಜನೆ ಪ್ರಭಾರ ಎಡಿ ವಸಂತರಾಜ್, ಯೋಜನಾಧಿಕಾರಿ ಹನುಮನಗೌಡ ಇದ್ದರು. ಇತರರಿದ್ದರು.
ಸಂಡೂರು: ವಿಬಿ ಜಿ ರಾಮ್ ಜಿ ಯೋಜನೆಯಡಿ ಒಂದು ಕುಟುಂಬಕ್ಕೆ ಆರ್ಥಿಕ ವರ್ಷದಲ್ಲಿ 125 ದಿನ ಕೆಲಸ ಹಾಗೂ ಪ್ರತಿದಿನ 382 ರೂ. ಕೂಲಿ ಹಣ ಸಿಗಲಿದೆ ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.
ತಾಪಂ ಆವರಣದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಪ್ರಚಾರಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಿದ್ದು, ಒಟ್ಟು 318 ಕಾಮಗಾರಿಗಳನ್ನು ಅನುಮತಿಸಲಾಗಿದೆ. ಜಲ ಸಂಬಂಧಿತ 107, ಗ್ರಾಮೀಣ ಮೂಲಸೌಕರ್ಯ 90, ಮೂಲಸೌಕರ್ಯ 86, ತೀವ್ರ ಹವಾಮಾನ ಘಟನೆಗಳ ಶಮನಕ್ಕಾಗಿ ಒಟ್ಟು 35 ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು. ಕೃಷಿ ಚಟುವಟಿಕೆಗಳ ಹಂಗಾಮಿನ ಉತ್ತುಂಗದಲ್ಲಿ ಕೃಷಿ ಕಾರ್ಮಿಕರ ಸಮರ್ಪಕ ಲಭ್ಯತೆ ಸುಗಮಗೊಳಿಸಲು 60 ದಿನಗಳ ವಿರಾಮ ಸಿಗಲಿದೆ. ಎಲ್ಲ ಕೂಲಿಕಾರ್ಮಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಸಲಹೆ ನೀಡಿದರು.
ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ, ಬಿಇಒ ಡಾ.ಐ.ಆರ್.ಅಕ್ಕಿ, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ, ಸಿಡಿಪಿಒ ಪಿ.ನಾಗರಾಜ್ ಇತರರಿದ್ದರು.