ಯಶಸ್ವಿನಿ ಯೋಜನೆಯ ಪ್ರಯೋಜನೆ ಪಡೆಯಿರಿ

ಸಿರಿಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ಯಶಸ್ವಿನಿ ಕಾಡ್ ವಿತರಿಸಲಾಯಿತು.
ಸಿರಿಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ಯಶಸ್ವಿನಿ ಕಾಡ್ ವಿತರಿಸಲಾಯಿತು.
Published on
ಸಿರಿಗೇರಿ: ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಸಹಕಾರ ಸಂಘಗಳ ಮೂಲಕ ಯಶಸ್ವಿನಿ ಯೋಜನೆ ಜಾರಿಗೆ ತಂದಿದ್ದು, ಒಂದು ಕುಟುಂಬಕ್ಕೆ ಐದು ಲಕ್ಷ ರೂ.ವರೆಗೆ ಶಸ್ತ್ರಚಿಕಿತ್ಸೆಗೆ ಅವಕಾಶ ಇದೆ. ಈ ಯೋಜನೆಯ ಸದುಪಯೋಗ ಪಡೆಯಿರಿ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಸ್.ಎಂ.ನಾಗರಾಜಸ್ವಾಮಿ ಹೇಳಿದರು.
ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಯಶಸ್ವಿನಿ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಯಶಸ್ವಿನಿ ಯೋಜನೆಗೆ ಹೆಸರು ನೋಂದಾಯಿಸಲು ಒಂದು ಕುಟುಂಬದ ನಾಲ್ಕು ಸದಸ್ಯರಿಗೆ 500 ರೂ. ಶುಲ್ಕ ಇದ್ದು, ಹೆಚ್ಚುವರಿಯಾಗಿ ಒಬ್ಬ ವ್ಯಕ್ತಿಗೆ ಒಂದು ನೂರು ರೂ. ಪಾವತಿಸಬೇಕಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸದಸ್ಯರಿಗೆ ಯಾವುದೇ ಶುಲ್ಕ ಇಲ್ಲ ಎಂದು ತಿಳಿಸಿದರು.
ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅವಿನಾಶ್ ರೆಡ್ಡಿ ಮಾತನಾಡಿ, ಈ ಯೋಜನೆಯಡಿ ಸರ್ಕಾರ ನಿಗದಿಪಡಿಸಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಪತ್ತಿನ ಸಹಕಾರ ಸಂಘದಡಿ 230 ಫಲಾನುಭವಿ ಕುಟುಂಬಗಳಿವೆ ಎಂದು ತಿಳಿಸಿದರು. ಫಲಾನುಭವಿಗಳಾದ ಬಕಾಟೆ ಕುಮಾರಪ್ಪ, ಗಾದಿಲಿಂಗಪ್ಪ, ಶಂಕ್ರಮ್ಮ ಕೆ., ಸಣ್ಣ ಹೊನ್ನೂರಪ್ಪ, ಎರಿಸ್ವಾಮಿಗೆ ಕಾರ್ಡ್ ವಿತರಿಸಲಾಯಿತು.
ಸಂಘದ ಅಧ್ಯಕ್ಷ ಬಿ.ಸೋಮಶೇಖರಪ್ಪ, ಉಪಾಧ್ಯಕ್ಷ ದರೂರು ಚನ್ನಪ್ಪ, ನಿರ್ದೇಶಕರಾದ ಗರ್ಜಿ ಲಿಂಗಪ್ಪ, ಬಕಾಟೆ ವೀರೇಶ್, ಬಿಚ್ಚುಗತ್ತಿ ಮಲ್ಲಯ್ಯ, ಭಜಂತ್ರಿ ರಮೇಶ್, ಕಡ್ಡಿಪುಡಿ ಶಿವಪ್ಪ, ಸುಗ್ನಳ್ಳಿ ರುದ್ರಪ್ಪ, ಸಿಬ್ಬಂದಿ ಸುರೇಶ್ ರಂಜಾನ್ ಸಾಬ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net